ಕ್ರೀಡಾ ಅಂಕಣದ ಗುರುತುದಾರ ತರಬೇತಿಗೆ ಅರ್ಜಿ ಆಹ್ವಾನ

December 23, 2020

ಮಡಿಕೇರಿ ಡಿ.23 : ಪ್ರಸಕ್ತ(2020-21) ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯ ಅಡಿಯಲ್ಲಿ ಅನುಷ್ಠಾನಗೊಳಿಸಲು ಕ್ರೀಡಾ ಅಂಕಣದ ಗುರುತುದಾರರು(ಮಾರ್ಕರ್) ತರಬೇತಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಫಲಾನುಭವಿಗಳು ಡಿಸೆಂಬರ್, 29 ರೊಳಗೆ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅರ್ಜಿ ಹಾಗೂ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಕೋರಿದ್ದಾರೆ.
ತರಬೇತಿಯನ್ನು ಕರ್ನಾಟಕದ ಯುವಜನರಿಗೆ ಮಾತ್ರ ನೀಡಲಾಗುವುದು. ಅರ್ಜಿದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. (ಆರ್.ಡಿ.ನಂಬರ್ ಇರುವ ಜಾತಿ ಪ್ರಮಾಣ ಪತ್ರ). 18 ರಿಂದ 35 ವರ್ಷ ವಯಸ್ಸಿನವರಾಗಿರಬೇಕು. ಸ್ವಯಂ ದೃಢೀಕೃತ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಂಬಂಧಪಟ್ಟ ಜಿಲ್ಲೆಯ ಉಪ/ ಸಹಾಯಕ ನಿರ್ದೇಶಕರ ಮೂಲಕ ಸಲ್ಲಿಸಬೇಕು. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಸರ್ಕಾರದಿಂದ ವಿತರಿಸಿರುವ ಗುರುತಿನ ಚೀಟಿಯ ಪ್ರತಿ ಲಗತ್ತಿಸುವುದು. ಕ್ರೀಡಾ ಅಂಕಣ ಗುರುತುಗಾರರು ಕನಿಷ್ಟ 7ನೇ ತರಗತಿ ಓದಿರಬೇಕು. ಬ್ಯಾಂಕ್ ಖಾತೆ ಕಡ್ಡಾಯವಾಗಿ ಅರ್ಜಿದಾರರ ಹೆಸರಿನಲ್ಲಿರಬೇಕು. ಬ್ಯಾಂಕ್ ಪಾಸ್‍ಪುಸ್ತಕದ ಮುಖಪುಟದ ಪ್ರತಿ ಲಗತ್ತಿಸಬೇಕು. (ಹೆಸರು, ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಕೋಡ್ ಇರುವ ಪುಟ). ದೈಹಿಕವಾಗಿ ಸದೃಢ ಹಾಗೂ ಚಟುವಟಿಕೆಯಿಂದ ಕೂಡಿದವರಾಗಿರಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಹಾಜರುಪಡಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಕೋರಿದ್ದಾರೆ.

error: Content is protected !!