ಸುಂಟಿಕೊಪ್ಪ ಸಂತ ಅಂತೋಣಿ ಚರ್ಚ್‍ನಲ್ಲಿ ಮಧ್ಯರಾತ್ರಿ ದಿವ್ಯ ಬಲಿಪೂಜೆ ನಡೆಯಲ್ಲ

23/12/2020

ಸುಂಟಿಕೊಪ್ಪ ಡಿ.23 : ಸುಂಟಿಕೊಪ್ಪದ ಸಂತ ಅಂತೋಣಿ ದೇವಾಲಯದಲ್ಲಿ ಡಿ.24 ರಂದು ಮಧ್ಯ ರಾತ್ರಿ ನಡೆಯಬೇಕಿದ್ದ ದಿವ್ಯ ಬಲಿಪೂಜೆಯು ಸಂಜೆ 7 ಗಂಟೆಗೆ ನಡೆಸಲಾಗುವುದು ಎಂದು ಧರ್ಮಗುರು ಅರುಳ್ ಸೆಲ್ವಕುಮಾರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರಾತ್ರಿ ಕಫ್ರ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿರುವುದರಿಂದ ಕ್ರಿಸ್‍ಮಸ್ ಆಚರಣೆಯ ಅಂಗವಾಗಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆಯನ್ನು ಸಂಜೆ ನಡೆಸಲಾಗುವುದೆಂದು ಹೇಳಿದ್ದಾರೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಭಕ್ತರು ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.