ಬಲೆ ಇಟ್ಟದ್ದು ಹಂದಿಗೆ ಬಿದ್ದದ್ದು ಹುಲಿ : ಬಾಳೆಲೆಯಲ್ಲಿ ಘಟನೆ

December 23, 2020

ಮಡಿಕೇರಿ ಡಿ.23 : ಹಂದಿಗೆಂದು ಇಟ್ಟ ಬಲೆಗೆ ಹುಲಿ ಬಿದ್ದ ಘಟನೆ ಬಾಳೆಲೆಯಲ್ಲಿ ನಡೆದಿದೆ. ಬಾಳೆಲೆ ಪಶುವೈದ್ಯ ಆಸ್ಪತ್ರೆ ಕಟ್ಟಡದ ಹಿಂಭಾಗ ಕಾಡುಹಂದಿಯನ್ನು ಹಿಡಿಯಲು ಯಾರೋ ಇರಿಸಿದ್ದ ಬಲೆಗೆ ಹುಲಿ ಆಕಸ್ಮಿಕವಾಗಿ ಸಿಲುಕಿ ಸೆರೆಯಾಗಿದೆ.
ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿಯನ್ನು ರಕ್ಷಿಸಿದರು. ನಂತರ ಚಿಕಿತ್ಸೆಯನ್ನು ನೀಡಿದ್ದು, ವ್ಯಾಘ್ರ ಆರೋಗ್ಯವಾಗಿದೆ. ಇದೇ ಹುಲಿ ಅಕ್ಕಪಕ್ಕದ ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿತ್ತು ಎಂದು ಹೇಳಲಾಗಿದೆ. (ಚಿತ್ರ ಕೃಪೆ : ರೋಷನ್ ಚೆಪ್ಪುಡಿರ)

error: Content is protected !!