ಲಡಾಕ್‍ಗೆ ಸೇನಾ ಮುಖ್ಯಸ್ಥ ಭೇಟಿ

December 24, 2020

ನವದೆಹಲಿ ಡಿ.24 : ಚೀನಾದೊಂದಿಗೆ ಗಡಿ ಸಂಘರ್ಷ ಹೊಂದಿರುವ ಪೂರ್ವ ಲಡಾಕ್ ನ ಅತಿ ಎತ್ತರದ ಫಾರ್ವರ್ಡ್ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ, ಒಟ್ಟಾರೆ ಮಿಲಿಟರಿ ತಯಾರಿಗಳ ಪರಾಮರ್ಶೆ ನಡೆಸಿದ್ದಾರೆ.
ಕಳೆದ ಜೂನ್ ತಿಂಗಳಿಂದ ಪೂರ್ವ ಲಡಾಕ್ ನಲ್ಲಿ ಸೇನೆ ನಿಲುಗಡೆಯಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು, ಲಡಾಕ್ ನ ರೆಚಿನ್ ಲಾ ಸೇರಿದಂತೆ ಫಾರ್ವರ್ಡ್ ಪ್ರದೇಶಗಳಿಗೆ ಭೇಟಿ ನೀಡಿ ಈ ಚಳಿಗಾಲದಲ್ಲಿ ಅಲ್ಲಿನ ಸೈನಿಕರ ಸ್ಥಿತಿಗತಿ, ಪ್ರದೇಶದ ಪರಿಸ್ಥಿತಿ ಬಗ್ಗೆ ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪೂರ್ವ ಲಡಾಕ್ ನ ಹಲವು ಪರ್ವತ ಭಾಗಗಳಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನವಿದ್ದು ಯಾವುದೇ ಕ್ಷಣದಲ್ಲಿಯೂ ಯುದ್ಧವೇರ್ಪಡುವ ಸನ್ನಿವೇಶದಂತಿದೆ. ಸುಮಾರು 50 ಸಾವಿರ ಭಾರತೀಯ ಸೇನಾಪಡೆಗಳು ನಿಯೋಜನೆಗೊಂಡಿವೆ. ಚೀನಾ ಕೂಡ ಸರಿಸುಮಾರು ಅಷ್ಟೇ ಪ್ರಮಾಣದ ಸೇನೆಯನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಫೈರ್ ಅಂಡ್ ಫ್ಯುರಿ ಕಾಪ್ರ್ಸ್ ಎಂದು ಕರೆಯಲ್ಪಡುವ ಲೇಹ್ ಮೂಲದ 14 ಕಾಪ್ರ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಪೂರ್ವ ಲಡಾಕ್ ನ ಸ್ಥಿತಿಗತಿ ಬಗ್ಗೆ ಸೇನಾ ಮುಖ್ಯಸ್ಥರಿಗೆ ಮಾಹಿತಿ ನೀಡಿದರು.

error: Content is protected !!