ಖಲಿಸ್ತಾನಿ ಭಯೋತ್ಪಾದಕನ ಬಂಧನ

December 24, 2020

ನವದೆಹಲಿ ಡಿ.24 : ಖಲಿಸ್ತಾನ್ ಪ್ರತ್ಯೇಕರಾಜ್ಯಕ್ಕಾಗಿ ಭಾರತದಲ್ಲಿ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಸೈಪ್ರಸ್ ನಿಂದ ಗಡಿಪಾರು ಮಾಡಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್‍ಐಎ ಬಂಧಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಕಾಯ್ದೆ, ಮಹಾರಾಷ್ಟ್ರ ಪೆÇಲೀಸ್ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪಿ ಗುರ್ಜೀತ್ ಸಿಂಗ್ ವಿರುದ್ಧ ಪ್ರಧಾನ ತನಿಖಾ ಸಂಸ್ಥೆ ಎನ್‍ಐಎ ಕಳೆದ ಜನವರಿಯಲ್ಲಿ ಪ್ರಕರಣ ದಾಖಲಿಸಿತ್ತು.
ಗುರ್ಜೀತ್ ಸಿಂಗ್ ಮುಖ್ಯ ಆರೋಪಿಯಾಗಿದ್ದು ಇವನೊಂದಿಗೆ ಹರ್ಷಲ್ ಮತ್ತು ಮೊಯಿನ್ ಖಾನ್ ಎಂಬಿಬ್ಬರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗುವ ಮೂಲಕ ಖಲಿಸ್ತಾನ್ ಪ್ರತ್ಯೇಕ ರಾಜ್ಯ ರಚನೆಯ ಅಂತಿಮ ಗುರಿಯೊಂದಿಗೆ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸುವ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಕ್ತಾರರು ತಿಳಿಸಿದ್ದಾರೆ.

error: Content is protected !!