ಬೆಂಗಳೂರು ಟರ್ಫ್ ಕ್ಲಬ್ ಮುಖ್ಯಸ್ಥರಾಗಿ ಡಿ.ವಿನೋದ್ ಶಿವಪ್ಪ ಆಯ್ಕೆ

December 24, 2020

ಮಡಿಕೇರಿ ಡಿ.24 : ಉಪಾಸಿ ಮಾಜಿ ಅಧ್ಯಕ್ಷ ಕೊಡಗಿನ ಬೆಳೆಗಾರ ಡಿ.ವಿನೋದ್ ಶಿವಪ್ಪ ಅವರು ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಮುಖ್ಯಸ್ಥರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಕ್ಲಬ್ ಆಡಳಿತ ಸಮಿತಿಯ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
::: ಸಮಿತಿ ವಿವರ :::
ಸ್ಟುವಡ್ಸ್: ಕೆ.ಉದಯ್ ಈಶ್ವರನ್, ಸತೀಶ್ ಎನ್ ಗೌಡ, ನವಲ್ ಆರ್.ನರೀವಾಲಾ. ಸದಸ್ಯರು : ಎಲ್.ಶ್ರೀನಿವಾಸರೆಡ್ಡಿ, ಡಿ.ಕೆ.ಅಶ್ವಿನ್.
ಸ್ಟುವಡ್ಸ್ (ಸರ್ಕಾರದ ಪ್ರತಿನಿಧಿ) : ಕರ್ನಾಟಕ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಪ್ರೊ.  ಎಸ್.ಎಂ.ಜಯದೇವಪ್ಪ.
ಸದಸ್ಯರು : ಜಿ.ಶಿವಕುಮಾರ್

error: Content is protected !!