ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ 9.75 ಲಕ್ಷ ರೂ. ಲಾಭ

December 24, 2020

ಮಡಿಕೇರಿ ಡಿ.24 : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ 2019-20 ನೇ ಸಾಲಿನಲ್ಲಿ 9.75 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರುಗಳು ಸಂಘದ ಮೂಲಕವೇ ಏಲಕ್ಕಿ ಮತ್ತು ಕರಿಮೆಣಸು ವ್ಯವಹಾರ ಮಾಡುವಂತೆ ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ಮನವಿ ಮಾಡಿದ್ದಾರೆ.
ನಗರದ ಕೆಳಗಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ ಸ್ಥಗಿತಗೊಂಡಿರುವ ಏಲಕ್ಕಿ ಮತ್ತು ಕರಿಮೆಣಸು ವ್ಯವಹಾರವನ್ನು ಪುನರ್ ಆರಂಭಿಸಲು ನಿರ್ಧರಿಸಲಾಗಿದೆ. ಸಂಘದ ಸದಸ್ಯರುಗಳು ಸಹಕಾರ ನೀಡುವುದರೊಂದಿಗೆ ಸಂಘದೊಂದಿಗೆ ವ್ಯವಹರಿಸುವಮತೆ ಕರೆ ನೀಡಿದ ಅವರು, ಸಂಘ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಸ್ಯರುಗಳು ಮತದಾನದಿಂದ ವಂಚಿತರಾಗುವುದನ್ನು ತಡೆಯಲು ರಿಬೇಟ್ ಪಾಸ್ ಪುಸ್ತಕ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ಸದಸ್ಯರುಗಳಿಗೆ ಶೇ.20 ರಷ್ಟು ಡಿವಿಡೆಂಟ್‍ನ್ನು ಘೋಷಿಸಲಾಗಿದೆ ಎಂದರು.
ನಿರ್ದೇಶಕರುಗಳಾದ ಬಿ.ಈ.ಬೋಪಯ್ಯ, ಕೆ.ಆರ್.ಅನಂತ್‍ಕುಮಾರ್, ಎಂ.ಜಿ.ಮೋಹನ್‍ದಾಸ್, ಬಿ.ಸಿ.ಚೆನ್ನಪ್ಪ, ಎ.ಎಂ.ಗೋಪಾಲಕೃಷ್ಣ, ಎಸ್.ಎಸ್.ಸುರೇಶ್, ಕೆ.ಡಿ.ವಿನೋದ್‍ಕುಮಾರ್, ಪಿ.ಕೆ.ಉದಯ್‍ಕುಮಾರ್, ಸಿ.ಪಿ.ವಿಜಯ್‍ಕುಮಾರ್, ಪಿ.ಟಿ.ಬೋಪಣ್ಣ, ಹೆಚ್.ಎ.ಬೊಳ್ಳು, ಕೆ.ಬಿ.ಬೆಳ್ಯಪ್ಪ, ಎ.ಕೆ.ಸುಶೀಲ, ಪಿ.ಎಸ್.ಕವಿತ, ಸಂಘದ ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.
ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ತಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷ ಕೆ.ಕೆ.ಗೋಪಾಲ ವಂದಿಸಿದರು. ಮೃತ ಸದಸ್ಯರುಗಳಿಗೆ ಸಭೆ ಸಂತಾಪ ಸೂಚಿಸಿತು.

error: Content is protected !!