ಮೊದಲ ಹಂತದಲ್ಲಿ ಕೊಡಗಿನಲ್ಲಿ 1,83,827 ಮಂದಿ ಮತ ಚಲಾಯಿಸಿದ್ದಾರೆ

24/12/2020

ಮಡಿಕೇರಿ ಡಿ.24 : ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಸಂಬಂಧ ಮಡಿಕೇರಿ ತಾಲ್ಲೂಕಿನ 108 ಕ್ಷೇತ್ರಗಳ 267 ಸ್ಥಾನಗಳಿಗೆ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ 177 ಕ್ಷೇತ್ರಗಳ 462 ಸ್ಥಾನಗಳಿಗೆ ಮಂಗಳವಾರ ನಡೆದ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ.77.35 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದ್ದಾರೆ.
ಗ್ರಾಮ ಪಂಚಾಯತ್ ಮೊದಲ ಹಂತದ ಚುನಾವಣೆ ಸಂಬಂಧ ಮಡಿಕೇರಿ ತಾಲ್ಲೂಕಿನ (26) ಮತ್ತು ಸೋಮವಾರಪೇಟೆ ತಾಲ್ಲೂಕಿನ (40) ಒಟ್ಟು 66 ಗ್ರಾ.ಪಂ.ಗಳ ಮಡಿಕೇರಿ(135) ಮತ್ತು ಸೋಮವಾರಪೇಟೆ ತಾಲ್ಲೂಕಿನ(222) ಒಟ್ಟು 357 ಮತಗಟ್ಟೆಗಳಲ್ಲಿ ಮತದಾನ ನಡೆಯಿತು.
ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ 66 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 2,37,658 ಮತದಾರರಿದ್ದಾರೆ. 1,18,097 ಪುರುಷ ಮತದಾರರು ಮತ್ತು 1,19,561 ಮಹಿಳಾ ಮತದಾರರಿದ್ದು, ಇವರಲ್ಲಿ 1,83,827 ಮತದಾರರು ಮತ ಚಲಾಯಿಸಿದ್ದಾರೆ. 91,441 ಪುರುಷ ಮತದಾರರು, 92,386 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟಾರೆ 77.35 ರಷ್ಟು ಮತದಾನವಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 44,793 ಪುರುಷ ಮತದಾರರು ಮತ್ತು 44,131 ಮಹಿಳಾ ಮತದಾರರು ಒಟ್ಟು 88,924 ಮತದಾರರಲ್ಲಿ 66,772 ಮಂದಿ ಮತ ಚಲಾಯಿಸಿದ್ದಾರೆ. ಇದರಲ್ಲಿ 33,480 ಪುರುಷ ಮತದಾರರು ಮತ್ತು 33,292 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು 75.09 ರಂದು ಮತದಾನವಾಗಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ 73,304 ಪುರುಷ ಮತದಾರರು ಮತ್ತು 75,430 ಮಹಿಳಾ ಮತದಾರರು ಒಟ್ಟು 1,48,734 ಮತದಾರರು ಇದ್ದು, 1,17,055 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 57,961 ಪುರುಷ ಮತದಾರರು ಮತ್ತು 59,094 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟು 78.70 ರಂದು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.