ಚುನಾವಣಾ ವೀಕ್ಷಕ ಎ.ದೇವರಾಜು ವಿರಾಜಪೇಟೆ ಮತಗಟ್ಟೆಗಳಿಗೆ ಭೇಟಿ

24/12/2020

ಮಡಿಕೇರಿ ಡಿ.24 : ಗ್ರಾ.ಪಂ.ಚುನಾವಣಾ ವೀಕ್ಷಕರಾದ ಎ.ದೇವರಾಜು ಅವರು ಎರಡನೇ ಹಂತದಲ್ಲಿ ನಡೆಯುತ್ತಿರುವ ಗ್ರಾ.ಪಂ. ಚುನಾವಣೆ ಸಂಬಂಧ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ನಡೆಯುವ ಮತ ಎಣಿಕೆ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಹಾಗೆಯೇ ಮತ ಪೆಟ್ಟಿಗೆ ಭದ್ರತಾ ಕೊಠಡಿ ಹಾಗೂ ವಿವಿಧ ಮತಗಟ್ಟೆಗೆ ತೆರಳಿ ಪರಿಶೀಲಿಸಿದರು. ತಹಶೀಲ್ದಾರ್ ಯೋಗಾನಂದ, ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿ ಪ್ರಮೋದ್ ಹಾಜರಿದ್ದರು.