ಕೊಡ್ಲಿಪೇಟೆಯಲ್ಲಿ ಡಿ.31 ರವರೆಗೆ ಸತ್ಯಾಪನೆ ಮುದ್ರೆ ಶಿಬಿರ

24/12/2020

ಮಡಿಕೇರಿ ಡಿ.24 : ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವು ಡಿಸೆಂಬರ್, 26 ರಿಂದ 31 ರವರೆಗೆ ಕೊಡ್ಲಿಪೇಟೆಯ ಯತೀಶ್ ಕಾಂಪ್ಲೆಕ್ಸ್ ಬಸವೇಶ್ವರ ಕಲ್ಯಾಣ ಮಂಟಪದ ಎದುರು ಏರ್ಪಡಿಸಲಾಗಿದೆ. ತಮ್ಮಲ್ಲಿ ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಲು ಕೋರಲಾಗಿದೆ ಎಂದು ಕಾನೂನು ಮಾಪನ ಇಲಾಖೆ ಅಧಿಕಾರಿ ಅವರು ತಿಳಿಸಿದ್ದಾರೆ.