ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಹಾಸಭೆ : ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ

December 25, 2020

ಮಡಿಕೇರಿ ಡಿ.25 : ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಮಹಾಸಭೆ ನಗರದ ಓಂಕಾರ ಸದನ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ಸಂಘದ ಅಭ್ಯುದಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಪ್ರಸ್ತುತ ಸಾಲಿನಲ್ಲಿ 37.94 ಲಕ್ಷ ರೂ. ಲಾಭವನ್ನು ಗಳಿಸಿದ್ದು, ಸಂಘದ ಮಡಿಕೇರಿಯ ಮುಖ್ಯ ಕಚೇರಿ 41.24 ರೂ. ಗಳಷ್ಟು ನಷ್ಟದಲ್ಲಿದೆ ಎಂದು ಹೇಳಿದರು.
ಹಿಂದಿನ ಸಾಲಿನಲ್ಲಿ ಒಟ್ಟು 14.47 ಕೋಟಿ ರೂ. ಕ್ರೋಡೀಕೃತ ನಷ್ಟವಾಗಿದ್ದು, ವರದಿ ಸಾಲಿನ ವರ್ಷಾಂತ್ಯಕ್ಕೆ 14.07 ಕೋಟಿ ರೂ. ನಷ್ಟದಲ್ಲಿ ಮುಂದುವರೆಯುತ್ತಿದೆ. ಹುಣಸೂರಿನಲ್ಲಿರುವ 30 ಎಕರೆ ಖಾಲಿ ಜಾಗದಲ್ಲಿ ವಾಣಿಜ್ಯೋದ್ದೇಶದ ಕಟ್ಟಡಗಳನ್ನು ನಿರ್ಮಾಣ ಮಾಡಿ ಸಂಘದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದಕ್ಕೆ ಸರ್ವ ಸದಸ್ಯರ ಒಪ್ಪಿಗೆ ಬೇಕು ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಪಾವತಿಯಲ್ಲಿ ರಿಯಾಯಿತಿ ನೀಡಿರುವುದಲ್ಲದೆ ಮಾಸಿಕ ಕಂತುಗಳ ಅನುಕೂಲವನ್ನು ಮಾಡಿಕೊಟ್ಟಿದೆ. ಸಂಘಕ್ಕೆ ಸೇರಿದ ಮಡಿಕೇರಿಯ ಕಟ್ಟಡದಲ್ಲಿ ಈ ಸ್ಟ್ಯಾಂಪಿಂಗ್, ಆರ್‍ಟಿಸಿ ಮತ್ತಿತರ ಸೌಲಭ್ಯಗಳ ಸೇವಾ ಕೇಂದ್ರವನ್ನು ಆರಂಭಿಸಲಾಗುವುದೆಂದು ಸಭೆಯ ಗಮನ ಸೆಳೆದರು.
ಸಭೆಯಲ್ಲಿದ್ದ ಸದಸ್ಯರುಗಳು ಸಂಘದಲ್ಲಾಗುತ್ತಿರುವ ಲಾಭ, ನಷ್ಟದ ಕುರಿತು ಚರ್ಚಿಸಿದರು. ನಿರ್ದೇಶಕರುಗಳಾದ ನಾಪಂಡ ರವಿಕಾಳಪ್ಪ, ಸುವಿನ್ ಗಣಪತಿ, ಪಿ.ಸಿ.ಕಾವೇರಮ್ಮ, ಚೆಟ್ರಂಡ ಲೀಲಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!