ಕಾಸರವಳ್ಳಿ ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ

25/12/2020

ಬೆಂಗಳೂರು ಡಿ.25 : ಕನ್ನಡದದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಎಸ್.ವಿ. ಕುಮಾರ್ ಸಂಗಮ ಫಿಲಂಸ್ ಬ್ಯಾನರ್ ನಲ್ಲಿ ತಯಾರಾದ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಚಿತ್ರವು ರೋಮ್ ನಲ್ಲಿ ನಡೆದ ಏಷ್ಯಾಟಿಕ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.
ಚಿತ್ರವು ಜಯಂತ್ ಕಾಯ್ಕಿಣಿಯವರ “ಹಾಲಿನ ಮೀಸೆ” ಕಥೆಯನ್ನಾಧರಿಸಿದ ಈ ಚಿತ್ರದಲ್ಲಿ ಧ್ರುಶಾ ಕೊಡಗು, ಆರಾಧ್ಯಾ, ಪ್ರವರ್ತ ರಾಜು, ಮಾಲತೇಶ್ ಮತ್ತಿತರರು ಇದ್ದಾರೆ.