ಸೀಗಡಿ ಮೀನು ಕರಿ ಮಾಡುವ ವಿಧಾನ

December 25, 2020

ಸೀಗಡಿ ಮೀನು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ನಾನಾ ರುಚಿಯಲ್ಲಿ, ನಾನಾ ಬಗೆಯಲ್ಲಿ ಖಾದ್ಯಗಳನ್ನು ತಯಾರಿಸಬಹುದು. ಅಂತಹ ಖಾದ್ಯಗಳಲ್ಲೊಂದು ಸೀಗಡಿ ಮೀನು ಕರಿ ಅಥವಾ ಸಾರು. ಇದನ್ನು ಕೂಡ ನಾನಾ ರುಚಿಯಲ್ಲಿ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು: ಶುದ್ಧ ಮಾಡಿದ ಸೀಗಡಿ ಮೀನು 20-25 ಅಥವಾ ಅರ್ಧ ಕೆಜಿ, ನಿಂಬೆರಸ, ಎಣ್ಣೆ 3 ಚಮಚ, ಸಾಸಿವೆ ಅರ್ಧ ಚಮಚ, ಕರಿ ಬೇವಿನ ಎಲೆ ಸ್ವಲ್ಪ, ಕತ್ತರಿಸಿದ ಈರುಳ್ಳಿ, ಉದ್ದದ್ದವಾಗಿ ಹಸಿಮೆಣಸಿನ ಕಾಯಿ 7-8, ಒಂದು ಇಂಚಿನಷ್ಟು ಉದ್ದದ ಶುಂಠಿ, ಕತ್ತರಿಸಿದ ಟೊಮೆಟೊ 1, ಅರಿಶಿಣ 1/4 ಚಮಚ, ತೆಂಗಿನ ಹಾಲು 1 ಕಪ್, ರುಚಿಗೆ ತಕ್ಕ ಉಪ್ಪು,

ತಯಾರಿಸುವ ವಿಧಾನ: ಸಾರು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಕರಿಬೇವಿನ ಎಲೆ, ಕತ್ತರಿಸಿದ ಈರುಳ್ಳಿ ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ, ಜಜ್ಜಿದ ಶುಂಠಿ ಹಾಕಿ ಈರುಳ್ಳಿ ಕಂದುಬಣ್ಣ ಬರುವವರೆಗೆ ಹುರಿಯಬೇಕು. ನಂತರ ಸೀಗಡಿ ಮೀನನ್ನು ಅದರಲ್ಲಿ ಹಾಕಿ 2-3 ನಿಮಿಷ ಹರಿಯಬೇಕು.

ಈಗ ಕತ್ತರಿಸಿದ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬಿಸಿ ಮಾಡಬೇಕು.ನಂತರ ಅರಿಶಿಣ ಮತ್ತು ರುಚಿಗೆ ತಕ್ಕ ಉಪ್ಪು ಒಂದು ಕಪ್ ತೆಂಗಿನ ಹಾಲು ಹಾಕಿ ಸೀಗಡಿ ಮೀನನ್ನು ಬೇಯಿಸಬೇಕು. ಮೀನು ಬೆಂದ ನಂತರ ರುಚಿಗೆ ತಕ್ಕ ನಿಂಬೆರಸ ಸೇರಿಸಿದರೆ ರುಚಿಕರವಾದ ಸೀಗಡಿ ಮೀನು ರೆಡಿ.

error: Content is protected !!