ಚೆಟ್ಟಳ್ಳಿ ಪುಣ್ಯಕೋಟಿ ವಾಣಿಜ್ಯ ಸಂಕೀರ್ಣದಲ್ಲಿ ಕಾಮಧೇನು : ಮುಂದಿನ ತಿಂಗಳು ಲೋಕಾರ್ಪಣೆ

December 25, 2020

ಸಿದ್ದಾಪುರ ಡಿ.25 : (ಅಂಚೆಮನೆ ಸುಧಿ) ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ‘ಪುಣ್ಯಕೋಟಿ’ ಹೆಸರಿನ ವಾಣಿಜ್ಯ ಸಂಕೀರ್ಣವೊಂದು ನಿರ್ಮಾಣಗೊಂಡಿದ್ದು, ನೇಪಾಳದ ಪಶುಪತಿನಾಥ ದೇವಸ್ಥಾನದ ಮಾದರಿಯ ಪಂಚಮುಖದ ಪಶುಪತಿ ಲಿಂಗ, ಗೋಮಾತೆ ಕಾಮಧೇನು ಹಾಗೂ ನಾಗದೇವತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.

ಕಾರ್ಕಳದ ಶಿಲ್ಪಿ ಗುಣಂತೇಶ್ವರ ಅವರ ಶಿಷ್ಯ ಶಿವಮೊಗ್ಗದ ವಿಜಯಕುಮಾರ್ ಅವರ ಕೈಚಳಕದಲ್ಲಿ ಕಾಮಧೇನು ಮೂರ್ತಿಯ ರಚನೆ ಭರದಿಂದ ಸಾಗಿದೆ. ಗುಣಂತೇಶ್ವರ ಅವರು ಪಶುಪತಿ ಲಿಂಗವನ್ನು ರಚಿಸಿದ್ದಾರೆ. ಈ ಈರ್ವರು ಶಿಲ್ಪಿಗಳು ಹಾಗೂ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರುಗಳು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.

2021 ಜ.15 ರಂದು ವಾಣಿಜ್ಯ ಸಂಕೀರ್ಣ ಹಾಗೂ ಮೂರ್ತಿಗಳು ಲೋಕಾರ್ಪಣೆಗೊಳ್ಳಲಿದೆ ಎಂದು ಮಣಿಉತ್ತಪ್ಪ ಮಾಹಿತಿ ನೀಡಿದರು. ಮೂರು ವ್ಯಾಪಾರ ಮಳಿಗೆ ಹಾಗೂ ಮೂರು ಅತಿಥಿಗೃಹದ ವ್ಯವಸ್ಥೆ ಇಲ್ಲಿದೆ.

error: Content is protected !!