ಗೋಪಾಲಪುರ ಕ್ಯಾಥೋಲಿಕ್ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ ಮಸ್ ಆಚರಣೆ

December 25, 2020

ಮಡಿಕೇರಿ ಡಿ. 25 :

ಶನಿವಾರಸಂತೆ ಹೋಬಳಿಗೆ ಸೇರಿದ ಗೋಪಾಲಪುರ ಕ್ಯಾಥೋಲಿಕ್ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಚರ್ಚ್‍ನ ಧರ್ಮಗುರು ಜಾಕಬ್ ಕೊಳನೂರು ನೇತೃತ್ವದಲ್ಲಿ ಬೈಬಲ್ ಪಠಣ, ಸಾಮೂಹಿಕ ಗಾಯನ ನಡೆದವು.
ಕ್ರಿಸ್‍ಮಸ್ ಟ್ರೀ, ವಿದ್ಯುತ್ ಅಲಂಕೃತ ಚರ್ಚ್, ಬಾಲ ಯೇಸುವಿನ ಗೋದಲಿ ಗಮನ ಸೆಳೆಯಿತು. ಕ್ರೈಸ್ತ ಬಾಂಧವರು ಸಿಹಿ ಹಂಚಿ ಸಂಭ್ರಮಿಸಿದರು.

error: Content is protected !!