ಸಾಹಿತ್ಯ ಸಮ್ಮೇಳನ : ಕವಿಗೋಷ್ಠಿಗೆ ಆಹ್ವಾನ

December 25, 2020

ಮಡಿಕೇರಿ ಡಿ. 25 : ಕನ್ನಡ ಸಾಹಿತ್ಯ ಪರಿಷತ್ತಿಗೆ 50ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮಾಚರಣೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕವಿ, ಕವಯತ್ರಿಯರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿದೆ. 25 ವರ್ಷ ವಯೋಮಿತಿಯೊಳಗಿನವರಿಗೆ ಯುವ ಕವಿಗೋಷ್ಠಿ, ಹಾಗೂ ನಂತರದ ಪುರುಷ ಹಾಗೂ ಮಹಿಳಾ ಕವಿಗಳಿಗೆ ಮುಕ್ತ ಕವಿಗೋಷ್ಠಿ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಕವಯತ್ರಿಯರು ಮುಂದಿನ ಜನವರಿ 2ನೇ ತಾರೀಖಿನ ಒಳಗಡೆ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್(9972538584, 8762110948), ಹಾಗೂ ತಳೂರು ಉಷಾರಾಣಿ(9900474485) ಇವರುಗಳಲ್ಲಿ ಹೆಸರು ನೋದಾಯಿಸಿಕೊಳ್ಳಬಹುದಾಗಿದೆ ಎಂದು ಪರಿಷತ್ತು ಪ್ರಕಟಣೆ ತಿಳಿಸಿದೆ.

error: Content is protected !!