ಸೋಮವಾರಪೇಟೆಯಲ್ಲಿ ಪುತ್ತರಿ ಊರೊರ್ಮೆ : ಕೊಡಗಿನ ಭೂಮಿಯನ್ನು ಮಾರದಿರಿ : ಶಾಸಕ ಅಪ್ಪಚ್ಚು ರಂಜನ್ ಕರೆ

December 25, 2020

ಮಡಿಕೇರಿ ಡಿ. 25 : ಕೊಡಗು ಜಿಲ್ಲೆ ನಿಜವಾದ ಸ್ವರ್ಗ, ಇಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ನರಕದಂತಹ ಊರುಗಳನ್ನು ಸೇರುವಂತಾಗಬೇಡಿ ಎಂದು ಶಾಸಕ ಅಪ್ಪಚ್ಚು ರಂಜನ್ ಕಿವಿಮಾತು ಹೇಳಿದರು.
ಸೋಮವಾರಪೇಟೆ ಕೊಡವ ಸಮಾಜದ ವತಿಯಿಂದ ಆಯೋಜಿಸಿದ್ದ ಪುತ್ತರಿ ಊರೊರ್ಮೆ ಕೂಟದ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ನಮ್ಮ ಹಿರಿಯರು ಹೇಳುತ್ತಿದ್ದದ್ದು, ಸತ್ತಮೇಲೆ ಸ್ವರ್ಗ ಸೇರುತ್ತೇವೆ ಎಂದು ಆದರೆ ನಮ್ಮ ಪಾಲಿಗೆ ನಾವು ಜೀವಿಸುತ್ತಿರುವ ಕೊಡಗು ಜಿಲ್ಲೆಯೇ ನಿಜವಾದ ಸ್ವರ್ಗಲೋಕ ಆಗಿದೆ. ನಮ್ಮ ಹಿರಿಯರು ಉಳಿಸಿ, ಬೆಳೆಸಿಕೊಂಡು ನಮಗೆ ಹಸ್ತಾಂತರಿಸಿರುವ ಭೂಮಿಯನ್ನು ಅನ್ಯರಿಗೆ ಮಾರಾಟ ಮಾಡದಂತೆ ಸಲಹೆ ನೀಡಿದರು.
ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಜನಿಸಿದ ಕೊಡವರ ಸಂಖ್ಯೆ ಕಡಿಮೆ ಇರಬಹುದು ಆದರೆ ವೀರರು, ಶೂರರು ಆಗಿದ್ದಾರೆ. ಸೈನ್ಯ, ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ರಾಷ್ಟ್ರಕ್ಕೆ ತಮ್ಮದೇ ಆದ ಸೇವೆ ನೀಡಿದ್ದಾರೆ. ಇದಕ್ಕೆ ಕೊಡವರೇ ಮೂವರು ಮೇಜರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವುದೇ ಸಾq್ಷಯಾಗಿದೆ. ನಮ್ಮ ಜನಾಂಗದ ಕಲೆ ಮತ್ತು ಸಂಸ್ಕøತಿ, ಉಡುಗೆ-ತೊಡುಗೆಗಳು ವಿಶಿಷ್ಟವಾಗಿದ್ದು ಇದು ಪ್ರಪಂಚದ ಬೇರೆಲ್ಲೂ ಕಾಣಲು ಅಸಾಧ್ಯ ಎಂದರು. ಜನಾಂಗದವರೊಂದಿಗೆ ಅನ್ಯ ಜನಾಂಗದವರನ್ನೂ ಪ್ರೀತಿಸುವಂತಾಗಬೇಕೆಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಡುವಂಡ ಎಸ್. ಚಂಗಪ್ಪ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸಲು ಇಂಗ್ಲಿಷ್ ಭಾಷೆ ಅವಶ್ಯಕವಿರಬಹುದು, ಆದರೆ ನಮ್ಮ ಜನಾಂಗದ ಅಭಿವೃದ್ಧಿಗೆ ಮಾತೃಭಾಷೆ ಅತ್ಯವಶ್ಯಕವಾಗಿದ್ದು, ಭಾಷಾ ಬೆಳವಣಿಗೆಗೆ ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ ಎಂದರು. ನಮ್ಮವರನ್ನೇ ದೋಷಾರೋಪ ಮಾಡುತ್ತಾ ತುಳಿಯುವದನ್ನು ಬಿಟ್ಟು, ಜನಾಂಗ ಬಾಂದವರೊಂದಿಗೆ ಉತ್ತಮ ಬಾಂದವ್ಯವನ್ನಿಟ್ಟುಕೊಂಡು ಸಮಾಜಮುಖಿಯಾಗಿ ಸಾಗುವುದನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಮತ್ತೋರ್ವ ಅತಿಥಿ ಉದ್ಯಮಿ ಕೊಂಗಂಡ ವಿನಯ್ ಸೋಮಯ್ಯ ಮಾತನಾಡಿ, ಪುಟ್ಟ ಜಿಲ್ಲೆ ಕೊಡಗಿನಿಂದ ಹೊರ ರಾಜ್ಯ, ರಾಷ್ಟ್ರಗಳಿಗೆ ತೆರಳಿರುವವರು ಅಲ್ಲಲ್ಲಿ ಕೊಡವ ಕೂಟಗಳನ್ನು ಕಟ್ಟಿಕೊಂಡು ಸಂಭ್ರಮಿಸುತ್ತಿದ್ದಾರೆ, ವಿದೇಶಗಳಲ್ಲಿಯೂ ಕೊಡವರಿಗೆ ವಿಶೇಷ ಗೌರವವಿದೆ. ನಮ್ಮ ಯುವ ಜನಾಂಗ ವಿದೇಶಗಳಿಗೆ ತೆರಳದಾಗ ಮಾತ್ರ ನಮ್ಮ ಜನಾಂಗದ ಹಿರಿಮೆ, ಗೌರವ ಅರಿಯಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಮಾಜದ ಅಧ್ಯಕ್ಷ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕೊಡವರ ಪರಮ ಶತ್ರು ಟಿಪ್ಪುಸುಲ್ತಾನ್, ಆದರೆ ಕೊಡವರ ವಿರೋಧದ ನಡುವೆಯೂ ಅವನ ಜನ್ಮದಿನಾಚರಣೆ ನಡೆಸಲು ಹೋಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಮೂಲೆ ಗುಂಪಾಗಿದ್ದಾರೆ. ಆದರೂ ಮೂಲೆಯಲ್ಲಿ ಕುಳಿತು ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿ, ಜನಾಂಗವನ್ನು ನಿಂಧಿಸಿರುವುದು ಖಂಡನೀಯ. ಕೊಡವರು ಗೋಮಾತೆ ಆರಾಧಕರಾಗಿದ್ದಾರೆ ಎಂದರು.
ಬೆಟ್ಟಗುಡ್ಡಗಳ ಮಧ್ಯೆ ನೆಲೆಸಿರುವ ಕೊಡವರು ನಿಜವಾಗಿಯೂ ಬುಡಕಟ್ಟು ಜನಾಂಗದವರು, ಇವರ ಮೀಸಲಾತಿಗಾಗಿ ಸಿ.ಎನ್.ಸಿ. ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಮೀಸಲಾತಿ ಜಾರಿಗೆ ಬಂದರೆ ಜನಾಂಗ ಬಾಂಧವರು ಹುದ್ದೆ, ಅಧಿಕಾರ ಹಿಡಿಯಲು ಸಾಧ್ಯವಾಗಲಿ ಎಂದರು.
ಈ ಸಂದರ್ಭ ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ವೇದಿಕೆಯಲ್ಲಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕೊಚಮಂಡ ಮನುಬಾಯಿ ಚಿಣ್ಣಪ್ಪ, ಸಮಾಜ ಉಪಾಧ್ಯಕ್ಷ ಬಾಚಿನಾಡ ಪೂಣಚ್ಚ, ಕಾರ್ಯದರ್ಶಿ ಪಂದ್ಯಂಡ ಶರತ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಅಜ್ಜಮಕ್ಕಡ ಅಕ್ಷಿತಾ ಕಾರ್ಯಪ್ಪ ಮತ್ತು ತಂಡದವರಿಂದ ಉಮ್ಮತಾಟ್, ಕೊಡವ ನೃತ್ಯಗಳು ಹಾಗೂ ವಾಲಗತ್ತಾಟ್ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

error: Content is protected !!