ಸಿಎನ್ ಸಿ ಹೋರಾಟ ಶ್ಲಾಘನೀಯ : ಪುತ್ತರಿ ಊರೋರ್ಮೆಯಲ್ಲಿ ಅಭಿಮನ್ಯುಕುಮಾರ್ ಮೆಚ್ಚುಗೆ
December 25, 2020

ಸೋಮವಾರಪೇಟೆ : ಬೆಟ್ಟಗುಡ್ಡಗಳ ಮಧ್ಯೆ ನೆಲೆಸಿರುವ ಕೊಡವರು ನಿಜವಾಗಿಯೂ ಬುಡಕಟ್ಟು ಜನಾಂಗದವರು. ಇವರ ಮೀಸಲಾತಿಗಾಗಿ ಕೊಡವ ನ್ಯಾಶನಲ್ ಕೌನ್ಸಿಲ್ ಎರಡು ದಶಕಗಳಿಂದ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದು ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಬಿ.ಅಭಿಮನ್ಯುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಜಾರಿಗೆ ಬಂದರೆ ಜನಾಂಗ ಬಾಂಧವರು ಹುದ್ದೆ, ಅಧಿಕಾರ ಹಿಡಿಯಲು ಸಾಧ್ಯವಾಗಲಿದೆ ಎಂದರು.
ಸೋಮವಾರಪೇಟೆ ಕೊಡವ ಸಮಾಜದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಪುತ್ತರಿ ಊರೋರ್ಮೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.