ಮರದ ರೆಂಬೆ ಬಿದ್ದು ಕಾರ್ಮಿಕ ಸಾವು : ಗೌಡಳ್ಳಿಯಲ್ಲಿ ಘಟನೆ

December 25, 2020

ಸೋಮವಾರಪೇಟೆ ಡಿ.25 : ಸಿಲ್ವರ್ ಮರದ ರೆಂಬೆ ಬಿದ್ದು ಟಿಂಬರ್ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಗೌಡಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸೋಮವಾರಪೇಟೆ ಸಮೀಪದ ಅಲೇಕಟ್ಟೆ-ಚೌಡ್ಲು ಗ್ರಾಮದ ನಿವಾಸಿ ವೆಂಕಟೇಶ್(51) ಮೃತ. ಗೌಡಳ್ಳಿ ಪ್ರಸನ್ನ ಎಂಬವರ ಕಾಫಿ ತೋಟದಲ್ಲಿ ಸಿಲ್ವರ್ ಮರ ಕಡಿದು ಬೀಳಿಸುವ ಸಂದರ್ಭ ರೆಂಬೆ ತಲೆ ಮೇಲೆ ಬಿದ್ದು ತೀವ್ರಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿಮಧ್ಯೆ ಮೃತಪಟ್ಟಿದ್ದಾರೆ. ಮೃತ ಪತ್ನಿ ಲೀಲಾ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

error: Content is protected !!