ಸೋಮವಾರಪೇಟೆ ಜಯವೀರಮಾತೆ ಚರ್ಚ್‍ನಲ್ಲಿ ಕ್ರಿಸ್ ಮಸ್ ಸಂಭ್ರಮ

December 25, 2020

ಸೋಮವಾರಪೇಟೆ ಡಿ.25 : ಕ್ರಿಸ್ ಮಸ್ ಮುನ್ನಾ ದಿನ ಗುರುವಾರ ರಾತ್ರಿ ಪಟ್ಟಣದ ಜಯವೀರಮಾತೆ ಚರ್ಚ್ ನಲ್ಲಿ ಬಾಲಯೇಸುವಿನ ಮೂರ್ತಿಯನ್ನು ಗೋದಾಲಿಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಗಾಯನ ಆಡಂಬರ ಬಲಿಪೂಜೆ ನಡೆಯಿತು. ಕ್ರೈಸ್ತರೆಲ್ಲರೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಧರ್ಮಗುರುಗಳಾದ ಎಂ.ರಾಯಪ್ಪ, ಕ್ರಿಸ್ಟಫರ್ ಹಾಗು ಚರ್ಚ್‍ನ ಪಾಲನ ಸಮಿತಿ ಕಾರ್ಯದರ್ಶಿ ಶೀಲಾ ಡಿಸೋಜ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!