ಅಬ್ಬೂರುಕಟ್ಟೆ ಸಂತ ಲಾರೆನ್ಸ್ ಚರ್ಚ್ ನಲ್ಲಿ ಕ್ರಿಸ್ ಮಸ್ ಆಚರಣೆ

December 25, 2020

ಸೋಮವಾರಪೇಟೆ ಡಿ.25 : ಇಲ್ಲಿಗೆ ಸಮೀಪದ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್ ನಲ್ಲಿ ಕ್ರೈಸ್ತಬಾಂಧವರು ಶುಕ್ರವಾರ ಕ್ರಿಸ್ ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 12ಕ್ಕೆ ನಡೆಯಬೇಕಿದ್ದ ಪ್ರಾರ್ಥನೆಯನ್ನು ಸಂಜೆ 5-30ರಿಂದಲೇ ಪ್ರಾರಂಭಿಸಿದರು. ಹಬ್ಬದ ಪ್ರಯುಕ್ತ ಬಾಲಯೇಸುವಿನ ಮೂರ್ತಿಯನ್ನು ಗೋದಲಿಯಲ್ಲಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಚರ್ಚ್ ನಲ್ಲಿ ಗಾಯನ ಆಡಂಬರ ಬಲಿಪೂಜೆ ನಡೆಯಿತು. ಕ್ರೈಸ್ತರೆಲ್ಲರೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚರ್ಚ್ ನ ಫಾದರ್ ಜೋಸೆಫ್ ಅಲೆಕ್ಸಾಂಡರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ತು ಡಿಸಿಲ್ವ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

error: Content is protected !!