9 ಕೋಟಿ ರೈತರಿಗೆ 18,000 ಕೋಟಿ

December 26, 2020

ನವದೆಹಲಿ ಡಿ.26 : ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯಡಿ 9 ಕೋಟಿ ರೈತರಿಗೆ 18,000 ಕೋಟಿ ರೂ.ಗಳನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ದೇಶಾದ್ಯಂತ 19,000 ಸ್ಥಳಗಳಲ್ಲಿ ರೈತರು-ಪ್ರಧಾನಿಗಳ ಸಂವಾದ ಕಾರ್ಯಕ್ರಮವನ್ನು ವಚ್ರ್ಯುಯಲ್ ಸಭೆ ಮೂಲಕ ಆಯೋಜಿಸಿದ್ದು, ಇದಕ್ಕೂ ಮುನ್ನ ಪ್ರಧಾನಿ 18,000 ಕೋಟಿ ರೂ. ಬಿಡುಗಡೆ ಮಾಡಿದರು.
ಡಿ.25, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಈ ದಿನವನ್ನು ಉತ್ತಮ ಆಡಳಿತ ದಿನ’ (ಗುಡ್ ಗೌರ್ನೆನ್ಸ್ ಡೇ) ಯನ್ನಾಗಿ ಆಚರಿಸುತ್ತದೆ. ಇದರ ಭಾಗವಾಗಿ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗಬೇಕಿರುವ 2,000 ರೂಪಾಯಿಗಳ ಕಂತನ್ನು ಬಿಡುಗಡೆ ಮಾಡಲಾಗಿದೆ.
ಈ ಯೋಜನೆಯಡಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ವಾರ್ಷಿಕ 6,000 ರೂಪಾಯಿಗಳನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಪ್ರಧಾನಿ-ರೈತರ ಸಂವಾದ ಏರ್ಪಡಿಸಲಾಗಿದೆ.

error: Content is protected !!