ಕಾಯ್ದೆ ವಿರೋಧಿಸುವವರು ಸ್ವಾರ್ಥಿಗಳು

December 26, 2020

ಬೆಂಗಳೂರು ಡಿ.26 : ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತ ಎಲ್ಲಿ ಬೇಕಾದರು ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡುವ ಅವಕಾಶವನ್ನು ಪ್ರಧಾನಿ ಮೋದಿ ನೀಡಿದರು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಯಶವಂತಪುರದ ಎಪಿಎಂಸಿ ಯಾರ್ಡ್‍ನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ದಿನಾಚರಣೆಯಲ್ಲಿ ಮಾತನಾಡಿದ ಅವರು ಕೆಲವು ಸ್ವಾರ್ಥಿಗಳು ತಿದ್ದುಪಡಿಯನ್ನು ವಿರೋಧಿಸುತ್ತಿದ್ದಾರೆ. ಶೇ.99 ರಷ್ಟು ರೈತರು ಇದನ್ನು ಸ್ವಾಗತಿಸಿದ್ದಾರೆ. ರೈತರ ಕಣ್ಣೀರನ್ನು ಒರೆಸಿ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ, ರೈತ ನೆಮ್ಮದಿಯಿಂದ ಗೌರವದಿದಂದ, ಸ್ವಾಭಿಮಾನದಿಂದ ಬಾಳುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ ಎಂದರು.
ನಾನು 50 ವರ್ಷಗಳ ಹಿಂದೆ ಶಿಕಾರಿಪುರದ ಎಪಿಎಂಸಿಯಲ್ಲಿ ಧರಣಿ ಕೂತಿದ್ದೆ. ರೈತ ಬೆಳೆದಂಥ ಬೆಳೆ ಆತ ಎಲ್ಲಿ ಒಳ್ಳೆಯ ಬೆಲೆ ಸಿಗುತ್ತೆ ಅಲ್ಲಿ ಮಾರಾಟ ಮಾಡುವ ಸ್ವಾತಂತ್ರ ಸಿಗಬೇಕು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಒಂದು ವಾರ ಸತ್ಯಾಗ್ರಹ ಮಾಡಿದ್ದೆ ಎಂದು ಸಿಎಂ ಸ್ಮರಿಸಿದರು.

error: Content is protected !!