ಬೇಗೂರಿನಲ್ಲಿ ಕೊಡವ ತಕ್ಕಮುಖ್ಯಸ್ಥರ ಸಮಾವೇಶ : ತಕ್ಕಾಮೆಯನ್ನು ಬಲಪಡಿಸಲು ಒಮ್ಮತದ ನಿರ್ಣಯ

December 26, 2020

ಮಡಿಕೇರಿ ಡಿ. 26 : ಕೊಡವ ಸಂಸ್ಕøತಿಯ ಭಾಗವಾದ ತಕ್ಕಾಮೆಗೆ ಗುರುವಿನ ಪ್ರಾಮುಖ್ಯತೆಯನ್ನು ನೀಡಬೇಕು. ತಕ್ಕಾಮೆ ಎಂಬುದು ಕೊಡವರ ಅಲಿಖಿತ ಸಂವಿಧಾನವಾಗಿದೆ. ಇದು ತಕ್ಕಮುಖ್ಯಸ್ಥರಿಗೆ ಇರುವ ಸಾಮೂಹಿಕ ಜವಾಬ್ದಾರಿಯಾಗಿದೆ. ತಕ್ಕಾಮೆಯನ್ನು ಬಲಪಡಿಸಬೇಕು, ಕೊಡಗಿನದ್ಯಾಂತ ತಕ್ಕರನ್ನು ಗುರುತಿಸಿ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ತಕ್ಕಾಮೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಸ್ವಾಗತಾರ್ಹ. ಯುವ ಪೀಳಿಗೆಗೆ ಇದರ ಮಹತ್ವವನ್ನು ಅರಿವು ಮೂಡಿಸಬೇಕಾಗಿದೆ, ಹಿಂದಿನ ಕಾಲದಂತೆ ತಕ್ಕಾಮೆಗೆ ಪ್ರಾಮುಖ್ಯತೆ ನೀಡಿದಾಗ ತಕ್ಕಾಮೆಯ ನೆರಳಿನಲ್ಲಿ ಕೊಡವ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸಮೃದ್ಧವಾಗಿ ಬೆಳೆಯುತ್ತದೆ ಎಂದು ದೇಶ ತಕ್ಕರಾದ ಮಾತಂಡ ಸಿ. ಮೊಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಯುನೈಟೆಡ್ ಕೊಡವ ಆರ್ಗನೈಷೇಸನ್ ಟ್ರಸ್ಟ್ ವತಿಯಿಂದ ಬೇಗೂರಿನ ಕೇವ್‍ರಿಡ್ಜ್ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ತಕ್ಕಮುಖ್ಯಸ್ಥರ ಸಮಾವೇಶವಾದ ” ಕೊಡವ ತಕ್ಕೋರ್ಮೆ-2020″ ಕಾರ್ಯಕ್ರಮವನ್ನು ‘ಕುತ್ತ್‍ಂಬೊಳ್‍ಚ’ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ‘ತಳಿಯತಕ್ಕಿ ಬೊಳಕ್’ ಮತ್ತು ‘ಪಟ್ಟ್’ ಹಿಡಿದು ಗೌರವಿಸಿ ವೇದಿಕೆಗೆ ಕರೆತರಲಾಯಿತು.

error: Content is protected !!