ಗೋಣಿಕೊಪ್ಪ ಪಟ್ಟಣದಲ್ಲಿ ಅಕ್ರಮ ಮದ್ಯ ಸಾಗಾಟ : ಆರೋಪಿ ಬಂಧನ : 17.280 ಲೀಟರ್ ಮದ್ಯ ವಶ

December 26, 2020

ಮಡಿಕೇರಿ ಡಿ. 26 : ಗೋಣಿಕೊಪ್ಪ ಪಟ್ಟಣದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ತಂಡದವರು ಬಂಧಿಸಿ ಸುಮಾರು 17.280 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಆಟೋರಿಕ್ಷಾ ವಾಹನ ಸಂಖ್ಯೆ ಕೆಎ-12 ಬಿ-7938ರಲ್ಲಿ 17.280 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂ.ಪಿ. ಮಹೇಂದ್ರ ವಿರುದ್ಧ ಅಬಕಾರಿ ನಿರೀಕ್ಷಕರಾದ ಲಕ್ಷ್ಮೀಶ, ಮೊಕದ್ದಮೆಯನ್ನು ದಾಖಲಿಸಿಕೊಂಡು ಬಂಧಿಸಲಾಗಿದೆ.
ಕೊಡಗು ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಪಿ. ಬಿಂದುಶ್ರೀ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಅಶೋಕ್ ಎ. ಪೂಜಾರಿ, ನಿರೀಕ್ಷಕ ಕೆ.ಎಸ್. ಉತ್ತಪ್ಪ, ಮುಖ್ಯ ರಕ್ಷಕ ಕೆ.ಎಸ್. ರಾಜ, ಶಿವಣ್ಣ ಹಾಗೂ ವಾಹನ ಚಾಲಕ ಪೂಣಚ್ಚ ಪಾಲ್ಗೊಂಡಿದ್ದರು.

error: Content is protected !!