ನೆಲಜಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

December 26, 2020

ಮಡಿಕೇರಿ ಡಿ. 26 : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಫಿ ತೋಟದೊಳಗೆ ಪಲ್ಟಿಯಾಗಿರುವ ಘಟನೆ ನಾಪೋಕ್ಲು ಸಮೀಪದ ನೆಲಜಿಯ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಬಾಳೆಯಡ ರಾಜ ಕುಂಜಪ್ಪ ಎಂಬವರಿಗೆ ಸೇರಿದ ಆಲ್ಟೊ ಕಾರು ನಿಯಂತ್ರಣ ತಪ್ಪಿ ಪಕ್ಕದ ಕಾಫಿತೋಟಕ್ಕೆ ಮಗುಚಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: Content is protected !!