ಸಾಯಂಕಾಲದ ತಿಂಡಿಗೆ ರುಚಿಕರವಾದ ಕಟ್ಲೇಟ್ ಮಾಡುವ ವಿಧಾನ

December 26, 2020

ಬೇಕಾಗುವ ಸಾಮಾಗ್ರಿಗಳು: ಕಾಟೇಜ್ ಚೀಸ್ 2-3 ಕಪ್, ಶುಂಠಿ ಪೇಸ್ಟ್ ಒಂದೂವರೆ ಚಮಚ, ಕೆಂಪು ಮೆಣಸಿನ ಪುಡಿ ಒಂದೂವರೆ ಚಮಚ, ಅರಿಶಿಣ ಪುಡಿ ಅರ್ಧ ಚಮಚ, ಹಸಿ ಮೆಣಸಿನ ಕಾಯಿ 2, ಚೀಸ್ 4-5 ಚಮಚ, ಮೊಟ್ಟೆ 1, ಬ್ರೆಡ್ ಚೂರುಗಳು 1 ಕಪ್, ಎಣ್ಣೆ, ರುಚಿಗೆ ತಕ್ಕ ಉಪ್ಪು,

ತಯಾರಿಸುವ ವಿಧಾನ: ಕಾಟೇಜ್ ಚೀಸ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿ ಕೈಯಿಂದ ಚೆನ್ನಾಗಿ ಹಿಸುಕಬೇಕು. ನಂತರ ಶುಂಠಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕತ್ತರಿಸಿದ ಹಸಿಮೆಣಸಿನಕಾಯಿ ಹಾಗೂ ಕತ್ತರಿಸಿದ ಈರುಳ್ಳಿ, ಮೊಟ್ಟೆ, ಬ್ರೆಡ್ ಚೂರುಗಳು, ರುಚಿಗೆ ತಕ್ಕ ಉಪ್ಪು ಹಾಕಿ 2-3 ನಿಮಿಷ ಮಿಶ್ರಣ ಮಾಡಬೇಕು. ಈಗ ಚೀಸ್ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಬೇಕು. ಈಗ ಅದರಿಂದ ಉಂಡೆಕಟ್ಟಿ ಕಟ್ಲೇಟ್ ಗೆ ತಟ್ಟುವ ರೀತಿ ತಟ್ಟಬೇಕು. ಈಗ ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಅರ್ಧದಷ್ಟು ಎಣ್ಣೆ ಕಾಯಿಸಬೇಕು, ಈಗ ಕಾದ ಎಣ್ಣೆಗೆ ಕಟ್ಲೇಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದರೆ ರುಚಿಕರವಾದ ಕಟ್ಲೇಟ್ ರೆಡಿ.

error: Content is protected !!