ಸಂಚಾರಿ ಠಾಣಾಧಿಕಾರಿ ವಿರುದ್ಧ ಅಸಮಾಧಾನ : ಕುಶಾಲನಗರದಲ್ಲಿ ಆಟೋಚಾಲಕರ ಪ್ರತಿಭಟನೆ

December 26, 2020

ಮಡಿಕೇರಿ ಡಿ.26 : ಕುಶಾಲನಗರ ಸಂಚಾರಿ ಠಾಣಾಧಿಕಾರಿ ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಆಟೋಚಾಲಕರು ಡಿವೈಎಸ್‍ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನೆಪವೊಡ್ಡಿ ಆಟೋಚಾಲಕರನ್ನು ನಿಂಧಿಸುತ್ತಿರುವ ಸಂಚಾರಿ ಠಾಣಾಧಿಕಾರಿ ಅಚ್ಚಮ್ಮ ಅವರು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದರು. ಠಾಣಾಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಡಿವೈಎಸ್‍ಪಿ ಸೂಕ್ತ ಕ್ರಮದ ಭರವಸೆ ನೀಡಿದರು. ನಂತರ ಚಾಲಕರು ಪ್ರತಿಭಟನೆಯನ್ನು ಕೈಬಿಟ್ಟರು.

error: Content is protected !!