ಕಿವಿ ಹಣ್ಣಿನ ಉಪಯೋಗಗಳು

December 26, 2020

ಕಿವಿ ಹಣ್ಣು ರುಚಿ ಮಾತ್ರವಲ್ಲ ಅನೇಕ ಆರೋಗ್ಯಕರ ಗುಣವನ್ನು ಹೊಂದಿದೆ. ಎಲ್ಲಾ ಹಣ್ಣಿನ ಅಂಗಡಿಗಳಲ್ಲಿ, ಫುಡ್ ಬಜಾರ್ ಗಳಲ್ಲಿ ದೊರೆಯುವುದು. ಈ ಹಣ್ಣು ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ರೂಟ್ಗರ್ಸ್ ವಿಶ್ವವಿಧ್ಯಾನಿಲಯದಲ್ಲಿ ಡಾ. ಪೌಲ್ ಲಾಚಾನ್ಸ್ ನಡೆಸಿದ ಅಧ್ಯಯನದಿಂದ ಧೃಢ ಪಟ್ಟಿದೆ. ಈ ಅಧ್ಯಯನದಲ್ಲಿ ಸಾಮಾನ್ಯವಾಗಿ ದಿನ ನಿತ್ಯ ತಿನ್ನುವ ಸುಮಾರು 27 ಹಣ್ಣುಗಳನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಅದರಲ್ಲಿ ಕಿವಿ ಹಣ್ಣು ಇತರ ಎಲ್ಲಾ ಹಣ್ಣುಗಳಿಗಿಂತ ಅತ್ಯಾಧಿಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಎಂದು ತಿಳಿದು ಬಂದಿದೆ.

ಚೀನಾದ ಯಾಂಗ್‍ತ್ಸೆ ನದಿಯ ಪರ್ವತ ಪ್ರದೇಶಗಳಲ್ಲಿ ಬೆಳೆಯುವುದರ ಜೊತೆಗೆ ಸಿಚೌನ್ ಸೇರಿದಂತೆ ಇತರ ಪ್ರದೇಶದಲ್ಲಿಯೂ ಬೆಳೆಯಲಾಗುತ್ತದೆ.

ಇದು ಮಿಟಮಿನ್ ಇ ಮತ್ತು ಎ ಅಂಶವನ್ನು ಹೊಂದಿದೆ. ಕಿವಿ ಹಣ್ಣಿನ ಬೀಜದ ಎಣ್ಣೆ ಸರಾಸರಿ 62% ಆಲ್ಫಾಲಿಲೋಲೆನಿಕ್ ಆಮ್ಲಗಳನ್ನು ಹೊಂದಿದೆ. ಡೆಂಘ್ಯೂ ಜ್ವರ ಇದ್ದವರು ಪ್ರತಿದಿನ ಈ ಹಣ್ಣನ್ನು ತಿನ್ನುವುದರಿಂದ ರಕ್ತಕಣವನ್ನು ಹೆಚ್ಚು ಮಾಡುತ್ತದೆ.

ಈ ಹಣ್ಣಿನಲ್ಲಿ ಹೃದಯಕ್ಕೆ ಬೇಕಾದ ಇ ಜೀವಸತ್ವವಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಗರ್ಭಿಣಿಯರು ಈ ಹಣ್ಣು ತಿನ್ನುವುದರಿಂದ ಗರ್ಭಸ್ಥ ಶಿಶುವಿಗೆ ರಕ್ಷ ನೀಡುತ್ತದೆ. ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುದನ್ನು ತಡೆಯುತ್ತದೆ.ಜೀವಕೋಶಗಳಲ್ಲಿ ಡಿಎನ್‍ಎ ಹಾನಿಯನ್ನು ತಡೆಯುತ್ತದೆ. ಈ ರೀತಿ ಕಿವಿ ಹಣ್ಣಿನಲ್ಲಿ ಆರೋಗ್ಯಕ್ಕೆ ಒಳಿತಾಗುವ ಅನೇಕ ಗುಣವಿದೆ.

ಕಿವಿಹಣ್ಣಿನಲ್ಲಿ ಕಿತ್ತಳೆ ಹಣ್ಣಿನಲ್ಲಿರುವುದಕ್ಕಿಂತ ಅಧಿಕ ಪಟ್ಟು ವಿಟಮಿನ್ ಸಿ ಹೊಂದಿದೆ. ವಿಟಮಿನ್ ಸಿ ಅಸ್ತಮಾದಂತಹ ಕಾಯಿಲೆಗಳು ತಡೆಗಟ್ಟಲು ಸಹಾಯ ಮಾಡುತ್ತದೆ. ಮಕ್ಕಳು ವಾರದಲ್ಲಿ 5-6 ಕಿವಿ ಹಣ್ಣು ತಿಂದರೆ ಅವರಿಗೆ ಅಸ್ತಮಾ, ಉಸಿರಾಟದ ತೊಂದರೆಗಳು ಬರದಂತೆ ತಡೆಯುತ್ತದೆ.

ಬಾಳೆ ಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಂಶದಷ್ಟು ಕಿವಿ ಹಣ್ಣಿನಲ್ಲಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಆರೋಗ್ಯದ ಸ್ವಾಸ್ಥ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಸೋಡಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಮಾಡುತ್ತದೆ.

ನಾರಿನಂಶ: ಇದರಲ್ಲಿ ನಾರಿನಂಶ ಅಧಿಕ ಇರುವುದರಿಂದ ಮಲಬದ್ಧತೆ, ಅಜೀರ್ಣತೆ ಸಮಸ್ಯೆ ನಿವಾರಣೆಯಾಗುವುದು. ಅಲ್ಲದೆ ನಾರಿನಂಶ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇದನ್ನು ತಿಂದರೆ ಬೇಗನೆ ಹೊಟ್ಟೆ ತುಂಬುವುದರಿಂದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಸಾಕು. ಇದರಿಂದಾಗಿ ತೂಕ ಇಳಿಕೆಗೆ ಸಹಕಾರಿಯಾಗುವುದು.

ಸತು: ಕಿವಿ ಹಣ್ಣಿನಲ್ಲಿರುವ ಸತು ಪುರುಷರಲ್ಲಿರುವ ಹಾರ್ಮೋನ್ ಟೆಸ್ಟೋಸ್ಟಿರೋನ್(testosterone) ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಇದು ತ್ವಚೆ, ಕೂದಲು ಮತ್ತು ಉಗುರಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

error: Content is protected !!