ಎಸ್.ಎಸ್.ಎಫ್ ಪಾಲಿಬೆಟ್ಟ ಸೆಕ್ಟರ್ ಅಧ್ಯಕ್ಷರಾಗಿ ಅಫ್ನಾಸ್ ಹೊಳಮಾಳ ಆಯ್ಕೆ

26/12/2020

ಮಡಿಕೇರಿ ಡಿ. 26 : ಎಸ್.ಎಸ್.ಎಫ್ ಪಾಲಿಬೆಟ್ಟ ಸೆಕ್ಟರ್ ಸಮಿತಿಯ ವಾರ್ಷಿಕ ಮಹಾಸಭೆ ಮಟ್ಟಮ್ ಶಾಖೆಯಲ್ಲಿ ಸೆಕ್ಟರ್ ಅಧ್ಯಕ್ಷ ಅಶ್ಕರ್ ಜೈನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಫ್ನಾಸ್ ಹೊಲಮಾಳ, ಪ್ರಧಾನ ಕಾರ್ಯದರ್ಶಿಯಾಗಿ ಸಾಬಿತ್ ಮಾಲ್ದಾರೆ, ಕೋಶಾಧಿಕಾರಿಯಾಗಿ ಜಾಬಿರ್ ಹುಂಡಿ, ಉಪಾಧ್ಯಕ್ಷರಾಗಿ ಹಾರಿಸ್ ಬಯಾನಿ ಹುಂಡಿ ,ಕಮರುದ್ದೀನ್ ಅಹ್ಸನಿ ಮಾಲ್ದಾರೆ ಹಾಗೂ ಕಾರ್ಯದರ್ಶಿಗಳಾಗಿ ರಶಾದ್ ಹೊಲಮಾಳ, ಲತೀಫ್ ಫೈಜಾನಿ ಹುಂಡಿ , ಮಿಸ್ಹಬ್ ಹುಂಡಿ, ರಂಷೀದ್ ಪಾಲಿಬೆಟ್ಟ, ಸ್ವಾಲಿಹ್ ಮಾಲ್ದಾರೆ, ರಂಶಾದ್ ಹೊಲಮಾಳ ಆಯ್ಕೆಯಾದರು.

ಜಿಲ್ಲಾ ಕಾರ್ಯದರ್ಶಿ ಶಕೀರ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದೊಂದು ವರ್ಷದಲ್ಲಿ ಸಮಿತಿಯು ಕೈಗೊಂಡ ಕಾರ್ಯಚಟುವಟಿಕೆಗಳ ವರದಿಯನ್ನು ,ಲೆಕ್ಕಪತ್ರ ವರದಿಯನ್ನೂ ಮಂಡಿಸಲಾಯಿತು.

ಜಿಲ್ಲಾ ಸಮಿತಿ ಸದಸ್ಯ ಜುನೈದ್ ಅಮ್ಮತ್ತಿ ಹಾಗೂ ವಿರಾಜಪೇಟೆ ಡಿವಿಷನ್ ಅಧ್ಯಕ್ಷ ಯೂಸುಫ್ ಜೈನಿ ಕಾರ್ಯಕರ್ತರಿಗೆ ತರಗತಿಯನ್ನು ನಡೆಸಿದರು. ಕಾರ್ಯಕ್ರಮದ ನಿರ್ವಹಣಾ ಅಧಿಕಾರಿಯಾಗಿ ಜಲಾಲ್ ಮುಸ್ಲಿಯಾರ್ ಆಗಮಿಸಿದ್ದರು.

ಈ ಸಂದರ್ಭ ಜಿಲ್ಲಾ ಸಮಿತಿ ಸದಸ್ಯರಾದ ಜುಬೈರ್ ಸಅದಿ , ಮಾಜಿ ಕಾರ್ಯದರ್ಶಿ ಜಾಬಿರ್ ಮಟ್ಟಮ್, ವಿರಾಜಪೇಟೆ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ನಿಜಾಮುದ್ದೀನ್ ಮಟ್ಟಂ, ಹಾರಿಸ್ ಸಖಾಫಿ ಮಟ್ಟಮ್ ಇನ್ನಿತರರು ಕಾರ್ಯಕರ್ತರು ಹಾಜರಿದ್ದರು.