ಕಡಂಗದಲ್ಲಿ ಸರಳವಾಗಿ ನಡೆದ ಎಸ್.ಕೆ.ಎಸ್.ಬಿ.ವಿ.ಸ್ಥಾಪಕ ದಿನಾಚರಣೆ

26/12/2020

ಮಡಿಕೇರಿ ಡಿ.26 : ಕಡಂಗ ಮನ್ಶ ಉಲ್ ಉಲೂಂ ಮದ್ರಸ, ಎಸ್.ಕೆ.ಎಸ್.ಬಿ.ವಿ ಶಾಖೆಯ ವತಿಯಿಂದ ಎಸ್.ಕೆ.ಎಸ್.ಬಿ.ವಿ.ಸ್ಥಾಪಕ ದಿನಾಚರಣೆ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಮುಹ್ ಯಿದ್ದೀನ್ ಜುಮಾ ಮಸೀದಿ ಖತೀಬರಾದ ಹಮೀದ್ ದಾರಿಮಿ ನೆರವೇರಿಸಿದರು.
ಧ್ವಜಾರೋಹಣ ವನ್ನು ಎಸ್.ವೈ.ಎಸ್.ಕಡಂಗ ಶಾಖೆಯ ಅಧ್ಯಕ್ಷ ಯೂಸುಪ್ ಮೌಲವಿ ಮಾಡಿದರು. ಎಂ.ಯು.ಎಂ ಪ್ರಾಂಶುಪಾಲರಾದ ಸುಹೈಬ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ.ಯು.ಎಂ ಮುಅಲ್ಲಿಮರಾದ ರಫೀಖ್ ದಾರಿಮಿ,ಹನೀಫ್ ಮೌಲವಿ ಹಾಗೂ ಅಹ್ಮದ್ ಇನ್ನಿತರರು ಹಾಜರಿದ್ದರು.