ಸಿದ್ದಾಪುರದಲ್ಲಿ ಮುಅಲ್ಲಿಂ ಹಾಗೂ ಮೇನೆಜ್ಮೆಂಟ್ ಪ್ರತಿನಿಧಿ ಸಂಗಮ ಕಾರ್ಯಕ್ರಮ

December 26, 2020

ಮಡಿಕೇರಿ ಡಿ. 26 : ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಅಧೀನದಲ್ಲಿ ಮುಅಲ್ಲಿಂ ಹಾಗೂ ಮೇನೆಜ್ಮೆಂಟ್ ಪ್ರತಿನಿಧಿ ಸಂಗಮ ಕಾರ್ಯಕ್ರಮ ಎಸ್.ಆರ್.ಜೆ.ಎಂ ಅಧ್ಯಕ್ಷ ಆರಿಫ್ ಫೈಸಿ ಅವರ ಅಧ್ಯಕ್ಷತೆಯಲ್ಲಿ ಸಿದ್ದಾಪುರ ಮುನವವಿರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.

ಯೂಸುಫ್ ಮುಸ್ಲಿಯರ್ ಅವರ ಕಿರಾಅತ್ ನೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಖತೀಬ್ ನೌಫಲ್ ಉದವಿ ಉದ್ಘಾಟಿಸಿದರು.

ಈ ಸಂದರ್ಭ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಮುಫದ್ದಿಶ್ ಇಬ್ರಾಹಿಂ ಧಾರಿಮಿ ಮಕ್ಕಿಯಾಡ್ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಿ, ಅವರ ಮುಂದಿನ ಭವಿಷ್ಯದ ಬಗ್ಗೆ ಎಲ್ಲರೂ ಕಾಳಜಿ ವಯಿಸಬೇಕೆಂದರು ಕರೆ ನೀಡಿದರು.

ಸಭೆಯೆಲ್ಲಿ ಹಸನ್ ಬಾಖವಿ, ರಊಫ್ ಹಾಜಿ, ಎಂ.ಕೆ ಮುಸ್ತಫ, ಅಂಧುಮಾಹಿನ್ ಕ ಅಶ್ರಫ್,ಅನೀಫ ,ಅಶ್ರಫ್ ಗುಯ್ಯಾ ಕೆ.ಟಿ ಮುಹಮ್ಮದ್ ಹಾಜಿ ಮತ್ತಿತರು ಹಾಜರಿದ್ದರು.

error: Content is protected !!