ಸೈಕಲ್ ನಿಂದ ಬಿದ್ದು ಬಾಲಕಿ ಸಾವು : ಗುಮ್ಮನಕೊಲ್ಲಿಯಲ್ಲಿ ಘಟನೆ

December 27, 2020

ಮಡಿಕೇರಿ ಡಿ.27 : ಸ್ನೇಹಿತರೊಂದಿಗೆ ಸೈಕಲ್ ಸವಾರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ನಡೆದಿದೆ.
ಮೂಲತಃ ಮೈಸೂರಿನ ಬನ್ನೂರು ನಿವಾಸಿ ಮೇಘನ (12) ಮೃತ ದುರ್ದೈವಿ. ಸೈಕಲ್ ನಿಂದ ಬಿದ್ದಾಗ ಎದೆ ಭಾಗಕ್ಕೆ ತೀವ್ರ ಘಾಸಿಯುಂಟಾಗಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

error: Content is protected !!