ಹನುಮ ಜಯಂತಿ : ಕೊಡಗು ಜಿಲ್ಲೆಯಾದ್ಯಂತ ಶ್ರೀಆಂಜನೇಯನ ಸ್ಮರಣೆ

27/12/2020

ಮಡಿಕೇರಿ ಡಿ.27 : ಕೊಡಗು ಜಿಲ್ಲೆಯಾದ್ಯಂತ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಾಲಯಗಳಲ್ಲಿ ಭಕ್ತರು ಶ್ರೀಆಂಜನೇಯನ ಸ್ಮರಣೆ ಮಾಡಿದರು.
ಮಡಿಕೇರಿಯ ಶ್ರೀಆಂಜನೇಯ ದೇವಾಲಯದಲ್ಲಿ ಅಭಿಷೇಕ, ಪುಷ್ಪಾಲಂಕಾರ, ಅರ್ಚನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಕುಶಾಲನಗರದ ರಥಬೀದಿಯ ಶ್ರೀಆಂಜನೇಯ ದೇವಾಲಯದ ವತಿಯಿಂದ ಹನುಮ ಜಯಂತಿ ಶ್ರದ್ಧಾಭಕ್ತಿಯಿಂದ ನಡೆಯಿತು. ಪಟ್ಟಣದಲ್ಲಿ ಹನುಮನ ಮೂರ್ತಿಯ ಮೆರವಣಿಗೆ ಭಕ್ತರ ಹರ್ಷೋದ್ಘಾರದೊಂದಿಗೆ ಸಾಗಿತು.