ಪೇರೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

28/12/2020

ಮಡಿಕೇರಿ ಡಿ. 28 : ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬಲ್ಲಮಾವಟಿಯ ಪೇರೂರು ಗ್ರಾಮದ ಮಾಂಜಾಟ್ ಕಾಲೋನಿಯಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಪಿ.ಎಂ. ಅಪ್ಪಣ್ಣ (48) ಮೃತಪಟ್ಟ ದುರ್ದೈವಿ. ಕಳೆದ ರಾತ್ರಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.