ಕುಶಾಲನಗರದಲ್ಲಿ ಎಸ್.ಕೆ.ಎಸ್.ಬಿ.ವಿ ಸ್ಥಾಪಕ ದಿನಾಚರಣೆ

December 28, 2020

ಮಡಿಕೇರಿ ಡಿ.28 : ದಾರುಲ್ ಉಲೂಂ ಮದ್ರಸ ಕುಶಾಲನಗರ ಎಸ್‌.ಕೆ.ಎಸ್.ಬಿ.ವಿ ಶಾಖಾ ವತಿಯಿಂದ ಎಸ್.ಕೆ.ಎಸ್.ಬಿ.ವಿ ಸ್ಥಾಪಕ ದಿನ ಆಚರಿಸಲಾಯಿತು.

ಖತೀಬರಾದ ಸೂಫಿ ದಾರಿಮಿ ಅವರ ದುಆಃ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ದಾರುಲ್ ಉಲೂಂ ಮದ್ರಸದ ಮರ್ಹೂಂ ಪಾಣಕ್ಕಾಡ್ ಸೈಯ್ಯದ್ ಉದ್ಘಾಟಿಸಿದರು. ಎಸ್.ಕೆ.ಎಸ್.ಬಿ.ವಿ ವ್ಯವಸ್ಥಾಪಕರಾದ ಉನೈಸ್ ಫೈಝಿ ಸ್ಥಾಪಕ ದಿನದ ಕುರಿತು ಮಾತನಾಡಿದರು

ಪ್ರಾಂಶುಪಾಲರಾದ ತಮ್ಲೀಖ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಸಾರಥಿಯಾಗಿದ್ದ ಕೆ.ಟಿ ಮಾಣು ಮುಸ್ಲಿಯಾರ್ ರವರ ನೇತೃತ್ವದಲ್ಲಿ ಆರಂಭಗೊಂಡ ಆಧ್ಯಾತ್ಮಿಕ ಮದ್ರಸ ವಿಧ್ಯಾರ್ಥಿಗಳ ಸಂಘಟನೆಯಾಗಿದೆ ಎಸ್.ಕೆ.ಎಸ್.ಬಿ.ವಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಅಶ್ರಫ್ ಅಝ್ಹರಿ, ಹಂಝ ಮುಸ್ಲಿಯಾರ್,ನಫೀರ್ ಮೌಲವಿ,ಶಖೀರ್ ಫೈಝಿ, ಮುಷ್ತಾಕ್ ದಾರಿಮಿ,ಎಸ್.ಕೆ.ಎಸ್.ಬಿ.ವಿ ಶಾಖಾಧ್ಯಕ್ಷರಾದ ಮೂನಿಸ್, ಕೋಶಾಧಿಕಾರಿ ಫಾಝಿಲ್, ಮೀಡಿಯಾ ನೇತಾರರಾದ ಝಾಹಿದ್ ಉಪಸ್ಥಿತರಿದ್ದರು.

ಎಸ್.ಕೆ.ಎಸ್.ಬಿ.ವಿ ಕನ್ವೀನರ್ ಇಬ್ರಾಹಿಂ ಬಾತಿಷಾ ಶಂಸಿ ಸ್ವಾಗತಿ, ಎಸ್.ಕೆ.ಎಸ್.ಬಿ.ವಿ ಪ್ರ.ಕಾರ್ಯದರ್ಶಿ ರಾಫಿ ವಂದಿಸಿದರು.

error: Content is protected !!