ಹನುಮ ಹುಟ್ಟಿದ ದಿನಾಂಕ ಗೊತ್ತಾ !

December 28, 2020

ಮೈಸೂರು ಡಿ.28 : ಮೈಸೂರಿನ ಸಿದ್ದರಾಮನ ಹುಂಡಿಗೆ ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆ ಭೇಟಿ ನೀಡಿದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹನುಮ ಜಯಂತಿಯ ಬಗ್ಗೆ ತಮ್ಮದೇ ಶೈಲಿಯ ಮಾತುಗಳನ್ನಾಡಿದ್ದಾರೆ.
ಸ್ನೇಹಿತರ ಜೊತೆ ನಾನ್ ವೆಜ್ ಊಟಕ್ಕೆ ಕುಳಿತಾಗ ಸಿದ್ದರಾಮಯ್ಯಗೆ ಅಭಿಮಾನಿಗಳು ಅಣ್ಣಾ, ಇವತ್ತು ಹನುಮ ಜಯಂತಿ…. ಎಂದರು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಯಾವ ಜಯಂತಿ? ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ? ಸ್ಪಷ್ಟವಾಗಿ ಗೊತ್ತಿದ್ರೆ ಜಯಂತಿ ಆಚರಣೆ ಮಾಡು ಇಲ್ಲದಿದ್ರೆ ಚಿಕನ್ ತಿನ್ನಬಹುದು, ಗೊತ್ತಿಲ್ಲ ತಾನೆ ಏನೂ ಆಗಲ್ಲ ತಿನ್ನು ಎಂದು ಹೇಳಿದ್ದಾರೆ.
ಈ ಮೊದಲು ನಾನು ದಿನಕ್ಕೆ 2 ಬಾರಿ ನಾನ್ ವೆಜ್ ಊಟ ಮಾಡುತ್ತಿದ್ದೆ. ಆಂಜಿಯೋಗ್ರಾಮ್ ಆದ ಬಳಿಕ ಈಗ ವಾರಕ್ಕೆ 3 ದಿನವಷ್ಟೇ ನಾನ್ ವೆಜ್ ಊಟ ಮಾಡುತ್ತಿದ್ದೇನೆ ಎಂದು ತಮ್ಮ ಆಹಾರದ ಕ್ರಮದ ಬಗ್ಗೆ ಮಾತನಾಡಿದ್ದಾರೆ.

error: Content is protected !!