“ಚಳಿಗಾಲದ ಅನುಭವ” ಕವನ ಸ್ಪರ್ಧೆ : ವಿಜೇತರ ಹೆಸರು ಪ್ರಕಟ

December 28, 2020

ಮಡಿಕೇರಿ ಡಿ. 28 : ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ವತಿಯಿಂದ ಕೊಡಗು ಜಿಲ್ಲೆಯ ಕವಿ ಮನಸ್ಸುಗಳಿಗಾಗಿ ವಾಟ್ಸ್‌ಅಪ್ ಮೂಲಕ ಆಯೋಜಿಸಿದ “ಚಳಿಗಾಲದ ಅನುಭವ” ಕವನ ಸ್ಪರ್ಧೆಯಲ್ಲಿ ಮೂರ್ನಾಡಿನ ಕೆ. ಜಿ. ರಮ್ಯ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕೆ.ಜಿ ರಮ್ಯ “ಮಾಘ ರಾಗ” ಕವನಕ್ಕೆ ಪ್ರಥಮ ಸ್ಥಾನಪಡೆದುಕೊಂಡಿದ್ದಾರೆ. ಚಳಿಗಾಲದ ಮರವಾಗಬೇಕು ಕವನಕ್ಕೆ ಸಂಗೀತಾ ರವಿರಾಜ್ ದ್ವಿತೀಯ ಸ್ಥಾನಪಡೆದುಕೊಂಡಿದ್ದು, “ನೇಸರನ ಸ್ಪರ್ಶಕ್ಕೆ ಹಿಮಬಾಲೆ ನಾಚಿ” ಕವನಕ್ಕೆ ವತ್ಸಲಾ ಶ್ರೀಶ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ತೀರ್ಪುಗಾರರ ಮೆಚ್ಚುಗೆಗೆ 10 ಕವನಗಳು ಆಯ್ಕೆಯಾಗಿದ್ದು, ಕಿಗ್ಗಾಲು ಎಸ್. ಗಿರೀಶ್ ರಚಿಸಿದ “ಚಳಿರಾಯನ ವೈಭವ”, ಎಂ. ಬಿ. ಜಯಲಕ್ಷ್ಮಿ ರಚಿಸಿದ “ಆಹಾ ಇದು ಚಳಿಗಾಲ”, ಹಾ. ತಿ. ಜಯಪ್ರಕಾಶ್ ರಚಿಸಿದ “ಚಳಿಗಾಲದ ಪಿಸುಮಾತು”, ವಿಶ್ವನಾಥ ಎಡಿಕೇರಿ ರಚಿಸಿದ “ಚಳಿಗಾಲದ ಅನುಭವಗಳು”, ಕೆ. ಎನ್. ಅನೂಷಾ ರಚಿಸಿದ “ಚಳಿಗಾಲ”, ಎಂ. ಜಿ. ರೂಪ ರಚಿಸಿದ “ವರ್ಷದ ಗೆಳತಿ”, ಪುಷ್ಪಲತಾ ಶಿವಪ್ಪ ರಚಿಸಿರುವ “ತರಗೆಲೆಗಳ ಬೆಂಕಿ”, ಕುಕ್ಕನೂರು ರೇಷ್ಮಾ ಮನೋಜ್ ರಚಿಸಿರುವ ಪ್ರಾತಃಕಾಲದ ಭೂರಮೆ, ವಿ. ಎಂ. ಚೈತ್ರಾ ರಚಿಸಿರುವ “ಚಳಿಗಾಲದ ಅನುಭವ”, ನಾ. ಕನ್ನಡಿಗ ರಚಿಸಿದ ‘ಅಂದು ಇಂದು’ ಕವನಗಳಿಗೆ ಪ್ರಶಸ್ತಿ ಪತ್ರ ನಗದು ಬಹುಮಾನ ನೀಡಲಾಗಿದ್ದು, ಭಾಗವಹಿಸಿದ ಎಲ್ಲಾ ಕವಿಗಳಿಗೆ ಪ್ರಶಂಸಾ ಪತ್ರವನ್ನು ನೀಡಲಾಗುವುದು ಎಂದರು.

error: Content is protected !!