“ಬಂಟ್ಸ್ ಪ್ರೀಮಿಯರ್ ಲೀಗ್-ಸೀಸನ್ 1” ಕ್ರಿಕೆಟ್ ಪಂದ್ಯಾವಳಿಗೆ ಜ.1 ರಂದು ಚಾಲನೆ

December 28, 2020

ಮಡಿಕೇರಿ ಡಿ.28 : ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯುವ ಬಂಟ್ಸ್ ವತಿಯಿಂದ ಜ.1 ರಿಂದ 3ರ ವರೆಗೆ ಐಪಿಎಲ್ ಮಾದರಿಯ “ಬಂಟ್ಸ್ ಪ್ರೀಮಿಯರ್ ಲೀಗ್-ಸೀಸನ್ 1” ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಲೀಗ್‍ನ ಆಯೋಜಕ ಬಿ.ಕೆ.ಶ್ರೀನಿವಾಸ್ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.1 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯನ್ನು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 8.30ಕ್ಕೆ ಕುಶಾಲನಗರದ ರೈ ಎಲೆಕ್ಟ್ರಿಕಲ್ಸ್ ಮಾಲೀಕ ವಸಂತ್ ರೈ ಉದ್ಘಾಟಿಸಲಿದ್ದಾರೆ ಎಂದರು.
ಈಗಾಗಲೇ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅನುಭವೀ ಆಟಗಾರರೊಂದಿಗೆ ಬಂಟ್ಸ್ ಜಾಗ್ವಾರ್ಸ್, ಬೊಟ್ಲಪ್ಪ ಬಂಟ್ಸ್ ಚಾಲೆಂಜರ್ಸ್, ನೀಲುಮಾಡು ವಾರಿಯರ್ಸ್, ಬಂಟ್ಸ್ ಆವೆಂಜರ್ಸ್ ಹಾಕತ್ತೂರು, ಮಲೆನಾಡು ಪ್ಯಾಂಥರ್ಸ್, ರೋರಿಂಗ್ ಬಂಟ್ಸ್ ಕುಶಾಲನಗರ, ಸುರಭಿ ಸೂಪರ್ ಕಿಂಗ್ಸ್, ಬಂಟ್ಸ್ ಬ್ರಿಗೇಡ್ ಮಡಿಕೇರಿ, ಹೀಗೆ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಲೀಗ್ ಮಾದರಿಯಲ್ಲಿ ಒಟ್ಟು 32 ಪಂದ್ಯಗಳು ನಡೆಯಲಿವೆ ಎಂದರು.
ವಿಜೇತ ತಂಡಕ್ಕೆ ರೂ.1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವೀತಿಯ ಸ್ಥಾನ ಪಡೆದ ತಂಡಕ್ಕೆ ರೂ.50 ಸಾವಿರ ಹಾಗೂ ಆಕರ್ಷಕ ಟ್ರೋಫಿ ಮತ್ತು ತೃತೀಯ ಸ್ಥಾನ ಪಡೆಯುವ ತಂಡಕ್ಕೆ ಆಕರ್ಷಕ ಟ್ರೋಪಿ ನೀಡಲಾಗುವುದು ಎಂದರು.

ಜ.3 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಮಡಿಕೇರಿಯ ಕಾವೇರಿ ಅರ್ಥ್ ಮೂವರ್ಸ್ ಮಾಲೀಕ ಐತ್ತಪ್ಪ ರೈ ಉದ್ಘಾಟಿಸಲಿದ್ದಾರೆ ಎಂದರು.
ಪಂದ್ಯಾವಳಿಯನ್ನು ವೀಕ್ಷಿಸಲು ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು BUNTS PREMIER LEAGUE COORG ನಲ್ಲಿ ಫೇಸ್‍ಬುಕ್ ಲೈವ್ ಹಾಗೂ ಯೂಟುಬ್‍ನಲ್ಲಿ ವೀಕ್ಷಿಸಬಹುದಾಗಿದೆ ಎಂದರು. ಹೆಚ್ಚಿನ ಮಾಹಿತಿಗೆ ದೀಪಕ್ ರೈ- 9900102646, ಪ್ರಜೀತ್ ರೈ-9886311993, ಅವಿನಾಶ್ ರೈ 9731155867 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಬಿ.ಕೆ.ಸದಾನಂದ ರೈ, ಪ್ರಜ್ವಿತ್ ರೈ, ಬಿ.ಕೆ.ಜಗನ್ನಾಥ್ ರೈ ಹಾಗೂ ಶರತ್ ರೈ ಉಪಸ್ಥಿತರಿದ್ದರು.

error: Content is protected !!