ಅಷ್ಟಬಂಧ ಬ್ರಹ್ಮಕಲಶೋತ್ಸವ : ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ 3 ನೇ ದಿನದ ಧಾರ್ಮಿಕ ವಿಧಿ ವಿಧಾನ

December 28, 2020

ಮಡಿಕೇರಿ ಡಿ. 28 : ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಂಜಾನೆಯಿಂದಲೇ ಗಣಪತಿ ಹೋಮ, ಅಂಕುರ ಪೂಜೆ, ಚೋರಶಾಂತಿ, ಸ್ವಶಾಂತಿ, ಅದ್ಬುತಶಾಂತಿ ಹೋಮಗಳು, ಕಲಶಾಭಿಷೇಕ ಹಾಗೂ ಮಧ್ಯಾಹ್ನದ ಪೂಜೆ ನಡೆದವು.
ಸಂಜೆ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ ಹಾಗೂ ಬ್ರಹ್ಮಕಲಶ ಮಂಟಪ ಸಂಸ್ಕಾರ ನಡೆಯಿತು.
ನಾಳಿನ ಕಾರ್ಯಕ್ರಮ : ಡಿ. 29 ರಂದು ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಅಂಕುರ ಪೂಜೆ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ ನಡೆಯಲಿದ್ದು, 12.30ಕ್ಕೆ ಮಧ್ಯಾಹ್ನದ ಪೂಜೆ ನಡೆಯಲಿದ್ದು, ರಾತ್ರಿ ಅಂಕುರ ಪೂಜೆ, ಭಾಗವತೀ ಸೇವೆ ನಡೆಯಲಿದೆ.

error: Content is protected !!