ಗ್ರಾ.ಪಂ.ಎರಡನೇ ಹಂತದ ಚುನಾವಣೆ: ಶೇ.69.58 ಮತದಾನ

December 28, 2020

ಮಡಿಕೇರಿ ಡಿ.28 : ಗ್ರಾಮ ಪಂಚಾಯತ್ ಎರಡನೇ ಹಂತದ ಚುನಾವಣೆ ಸಂಬಂಧ ವಿರಾಜಪೇಟೆ ತಾಲ್ಲೂಕಿನ 136 ಕ್ಷೇತ್ರಗಳ 366 ಸ್ಥಾನಗಳಿಗೆ ಭಾನುವಾರ ನಡೆದ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ.69.58 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳ 183 ಮತಗಟ್ಟೆಗಳಲ್ಲಿ ಮತದಾನವಾಗಿದ್ದು, ಒಟ್ಟು 1,16,228 ಮತದಾರರಿದ್ದು, ಇವರಲ್ಲಿ 57,709 ಪುರುಷರು ಮತದಾರರು ಮತ್ತು 58,515 ಮಹಿಳಾ ಮತದಾರರು ಮತ್ತು 4 ಇತರೆ ಮತದಾರರಿದ್ದು, ಇವರಲ್ಲಿ 80872 ಮತದಾರರು ಮತ ಚಲಾಯಿಸಿದ್ದಾರೆ. 40453 ಪುರುಷ ಮತದಾರರು, 40419 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟಾರೆ ಶೇ.69.58ರಷ್ಟು ಮತದಾನವಾಗಿದೆ.
ಶೇಕಡವಾರು ಮತದಾನ ಗಮನಿಸಿದಾಗ ಶೇ.70.098 ಪುರುಷ ಮತದಾರರು ಶೇ.69.07 ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!