ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ

28/12/2020

ಮಡಿಕೇರಿ ಡಿ.28 : ಬಹುಭಾಷಾ ಖ್ಯಾತ ನಟ ಕನ್ನಡದ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಅರವಿಂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕಾ ಸಹೋದ್ಯೋಗಿ ಅಕ್ಷಯ್ ಅವರನ್ನು ವರಿಸಿದ್ದಾರೆ.
ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ವಿವಾಹ ಸಮಾರಂಭ ನೆರವೇರಿತು. ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಆತ್ಮೀಯರಿಗೆ ಮಾತ್ರ ಮದುವೆಗೆ ಆಮಂತ್ರಣ ನೀಡಲಾಗಿತ್ತು.