ಕಾರು, ಬೈಕ್ ಡಿಕ್ಕಿ : ಬೈಕ್ ಸವಾರ ಗಂಭೀರ : ವಿರಾಜಪೇಟೆಯಲ್ಲಿ ಘಟನೆ

December 28, 2020

ಮಡಿಕೇರಿ ಡಿ.28 : ಬೈಕ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ನಡೆದಿದೆ. ನಿಯಂತ್ರಣ ಕಳೆದುಕೊಂಡ ಕಾರು ಪಕ್ಕದ ಅಂಗಡಿ ಮಳಿಗೆಗೆ ನುಗ್ಗಿದ ಪರಿಣಾಮ ಕಾರು ಚಾಲಿಸುತ್ತಿದ್ದವರಿಗೂ ಗಾಯಗಳಾಗಿವೆ.
ಗಾಯಾಳುಗಳಾದ ಬೈಕ್ ಸವಾರ ಕುಟ್ಟಂದಿ ಗ್ರಾಮದ ಅಲೇಯಂಡ ರಂಜನ್ ಹಾಗೂ ಬಿಟ್ಟಂಗಾಲದ ನಿವಾಸಿ ಕಾರು ಚಾಲಕ ಬೋಪಯ್ಯ ಅವರುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!