ಕಾರ್ಮಿಕ ಆತ್ಮಹತ್ಯೆ : ಕಡಂಗ ಗ್ರಾಮದಲ್ಲಿ ಪ್ರಕರಣ

December 28, 2020

ಮಡಿಕೇರಿ ಡಿ.28 : ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ವಿರಾಜಪೇಟೆಯ ಕಡಂಗ ಗ್ರಾಮದಲ್ಲಿ ನಡೆದಿದೆ.
ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಪಣಿ ಎರವರ ಅಪ್ಪಿ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಕ್ಕಳಿಲ್ಲದ ಕೊರಗು, ಮದ್ಯ ಸೇವನೆ ಮತ್ತು ಪತ್ನಿಯೊಂದಿಗಿನ ಕಲಹ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದೆ.
ಪತ್ನಿ ಯಶೋಧ ಅವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!