ಕರಡಿಗೋಡುವಿನಲ್ಲಿ ಮೂವರ ಮೇಲೆ ಚೂರಿ ಇರಿತ : ಆರೋಪಿಗಳು ಪರಾರಿ

December 29, 2020

ಮಡಿಕೇರಿ ಡಿ. 29 : ಕೊಡಗಿನ ಸಿದ್ದಾಪುರದ ಕರಡಿಗೋಡುವಿನಲ್ಲಿ ಮೂವರ ಮೇಲೆ ಚೂರಿ ಇರಿತ ಪ್ರಕರಣ ನಡೆದಿದೆ.
ವಿಲ್ಸನ್ (35), ಸ್ಟೀವನ್(28), ಮತ್ತೊಬ್ಬರು 17 ವರ್ಷ ಪ್ರಾಯದ ತರುಣಿ ಚೂರಿ ಇರಿತಕ್ಕೆ ಒಳಗಾಗಿದ್ದಾರೆ.
ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ರಾಮ್ ದಾಸ್ ಮತ್ತಿಬ್ಬರು ಸಹಚರರೊಂದಿಗೆ ಪರಾರಿಯಾಗಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ವಿಶೇಷ ತಂಡ ನಿಯೋಜನೆ ಮಾಡಲಾಗಿದೆ.

error: Content is protected !!