ಮಡಿಕೇರಿಯಲ್ಲಿ ಶ್ರೀರಾಮಮಂದಿರ ನಿಧಿ ಸಮರ್ಪಣಾ ಕಾರ್ಯಾಲಯ ಉದ್ಘಾಟನೆ : ಆಶೀರ್ವಚನ ನೀಡಿದ ಪೇಜಾವರ ಮಠಾಧೀಶರು

29/12/2020

ಮಡಿಕೇರಿ ಡಿ.29 : ಅಯೋಧ್ಯೆ ಶ್ರೀರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಪ್ರಯುಕ್ತ ಜಿಲ್ಲಾ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಇಂದು ಮಡಿಕೇರಿಯಲ್ಲಿ ನಡೆಯಿತು.
ಅಯೋಧ್ಯೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ಸದಸ್ಯರಾದ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕೊಡಗಿನ ಹಿರಿಯ ಕಿರಿಯ ಸ್ವಾಮೀಜಿಗಳು ಕಚೇರಿಯನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹಲವು ಹೋರಾಟಗಳ ಫಲವಾಗಿ ರಾಮಭಕ್ತರ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದರು.