ನೂತನ ಕೃಷಿ ಕಾಯಿದೆಯ ಕುರಿತು ಮಾಹಿತಿ

December 29, 2020

ಮಡಿಕೇರಿ ಡಿ.29 : ಗೋಣಿಕೊಪ್ಪಲು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಇವರು ಭಾರತ ಸರಕಾರ ಇತ್ತಿಚೆಗೆ ತರುತ್ತೀರುವ ನೂತನ ಕೃಷಿ ಕಾಯಿದೆಯ ಕುರಿತು ಮಾಹಿತಿ ನೀಡುತ್ತಿದೆ. ಈ ಕಾಯಿದೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲೆಯ ರೈತರಿಗೆ ಮನವರಿಕೆ ಮಾಡಿಕೊಡಲು ನೀಡಲಾಗುತ್ತಿದೆ.
ಆರ್ಥಿಕ ಉದಾರೀಕರಣದ ಹೊರತಾಗಿಯೂ ಕೃಷಿ ಮತ್ತು ಇತರ ಕ್ಷೇತ್ರಗಳ ನಡುವಿನ ಅಸಮಾನತೆ: ವಿಘಟಿತ (ತುಂಡು ತುಂಡಾದ) ಮಾರುಕಟ್ಟೆಗಳು ಹಾಗೂ ಮಾರುಕಟ್ಟೆಗಳ ಕೊರತೆ ಮತ್ತು ಹೆಚ್ಚಿನ ಮಾರುಕಟ್ಟೆ ಶುಲ್ಕಗಳು, ಅಸಮರ್ಪಕ ಮೂಲ ಭೂತಸೌಕರ್ಯ ಮತ್ತು ಸಾಲದ ಸೌಲಭ್ಯಗಳು, ಮಾಹಿತಿಯಲ್ಲಿ ಅಸಮರೂಪತೆ (ಮಾಹಿತಿ ಒಂದೇ ತೆರನಾಗಿ ಇಲ್ಲದಿರುವುದು). ಪರವಾನಿಗೆಯಲ್ಲಿ ನಿರ್ಭಂದ
ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020 ಲಾಭದಾಯಕ ಬೆಲೆಗಾಗಿ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಹಾಗೂ ಕೊಳ್ಳುವಲ್ಲಿ “ಆಯ್ಕೆಯ ಸ್ವಾತಂತ್ರ್ಯ” ಇರುತ್ತದೆ. ಎಪಿಎಂಸಿ ಆವರಣದ ಹೊರಗೆ ಸಮರ್ಥ, ಪಾರದರ್ಶಕ ಮತ್ತು ತಡೆರಹಿತ ಮುಕ್ತ ಅಂತರ ಮತ್ತು ಅಂತರ-ರಾಜ್ಯ ವ್ಯಾಪಾರ ಮತ್ತು ವಾಣಿಜ್ಯ, ಎಪಿಎಂಸಿ ಗಳು ಕಾರ್ಯ ನಿರ್ವಹಿಸುವದನ್ನು ಮುಂದುವರೆಸುತ್ತವೆ: ಈ ಕಾಯ್ದೆ ರೈತರಿಗೆ ಹೆಚ್ಚುವರಿ ಮಾರುಕಟ್ಟೆ ಮಾರ್ಗಗಳನ್ನು ಒದಗಿಸುತ್ತದೆ. ಕನಿಷ್ಠ ಬೆಂಬಲ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಕಾರ್ಯವಿಧಾನದ ಅಗತ್ಯತೆಯಂತೆ ಒಂದೇ ದಿನ ಅಥವಾ 3 ಕೆಲಸದ ದಿನಗಳಲ್ಲಿ ರೈತರಿಗೆ ಪಾವತಿ ಮಾಡಬೇಕಾಗುತ್ತದೆ. ಆನ್‍ಲೈನ್ ವ್ಯಾಪಾರವನ್ನು ಮಾಡಬಹುದು.
ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ, 2020. ರಾಷ್ಟ್ರೀಯ ಚೌಕಟ್ಟಿನ ಮೂಲಕ ರೈತರು ಕೃಷಿ ವ್ಯಾಪಾರ ಸಂಸ್ಥೆಗಳು, ಸಂಸ್ಕರಣೆಗಾರರು, ಸಗಟು ವ್ಯಾಪಾರಿಗಳು, ರಫ್ತುದಾರರು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೊತೆಗೆ ಭವಿಷ್ಯದ ಕೃಷಿ ಉತ್ಪನ್ನಗಳ ಮಾರಾಟ ನ್ಯಾಯಯುತ ಮತ್ತು ಪಾರದರ್ಶಕ ಪರಸ್ಪರ ಒಪ್ಪಿದ ಸಂಭಾವನೆ ಬೆಲೆ ಚೌಕಟ್ಟಿನಲ್ಲಿ ನಿರ್ವಹಿಸಲು ಅನುಕೂಲ ಮಾಡಿಕೊಡುವುದು. ಕೇಂದ್ರ ಸರಕಾರದ ಮಾದರಿ ಕೃಷಿ ಒಪ್ಪಂದಗಳಿಗೆ ಮಾರ್ಗಸೂಚಿಗಳು. ಉತ್ಪನ್ನಗಳ ಬೆಲೆಯನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಲಾಗುವುದು. ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದ ವಿವಾದ ಪರಿಹಾರದ ಕಾರ್ಯವಿಧಾನ: ರೈತರು ಮತ್ತು ಖರೀದಾರರ ಹಕ್ಕುಗಳನ್ನು ರಕ್ಷಿಸುವುದು.
ಕೃಷಿ ಸುಧಾರಣೆಗಳ ಪ್ರಯೋಜನಗಳು:-ಏಕೀಕೃತ ಮಾರುಕಟ್ಟೆ, ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂ.ಸಿಗಳ ಜೊತೆಗೆ ಬೇರೆ ಕಡೆ ಎಲ್ಲಿ ಉತ್ತಮ ಬೆಲೆ ದೊರೆಯುತ್ತದೆ ಅಲ್ಲಿ ಮಾರಾಟ ಮಾಡಲು ಅವಕಾಶವನ್ನು ಒದಗಿಸಲಾಗಿದೆ. ಎಪಿಎಂಸಿ ಯ ಏಕಸ್ವಾಮ್ಯ ಹತೋಟಿಯ ಅಂತ್ಯ. ಕನಿಷ್ಟ ಬೆಂಬಲ ಬೆಲೆಯು ರೈತರಿಗೆ ಸುರಕ್ಷತಾ ಜಾಲವಾಗಿ ಕಾರ್ಯನಿರ್ವಹಿಸುವುದು ಹಾಗೂ ಇದು ಮುಂದುವರೆಯುತ್ತದೆ. ರೈತರ ಹಕ್ಕುಗಳು ಕಾನೂನಿನ ಚೌಕಟ್ಟಿನ ಒಳಗೆ ರಕ್ಷಿಸಲ್ಪಡುತ್ತವೆ. ಮಾರುಕಟ್ಟೆ ಶುಲ್ಕ, ತೆರಿಗೆ ಇತ್ಯಾದಿಗಳಲ್ಲಿ ಕಡಿತ ಮತ್ತು ಉತ್ತಮ ಬೆಲೆ ಆವಿμÁ್ಕರ ರೈತನ ಹೊಲದ ಸನಿಹದಲ್ಲೇ ಮೂಲಸೌಕರ್ಯಗಳ ಅಭಿವೃದ್ಧಿ ಗುತ್ತಿಗೆ ಕೃಷಿ: ಬೆಲೆ ಆಶ್ವಾಸನೆಯ ಒಂದು ರೂಪ ಮತ್ತು ಆಹಾರ ಸಂಸ್ಕರಣಾ ವಲಯದೊಂದಿಗೆ ಸಂಪರ್ಕ ಹೆಚ್ಚಿಸುತ್ತದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಕೂಡ ಕೃಷಿ ಲಾಭದಾಯಕವಾಗಬಹುದು. ಎಪಿಎಂಸಿ ಮಂಡಿಯಲ್ಲಿ ಮಾರಾಟ ಮಾಡಲು ಅಥವಾ ಬೇರೆ ಯಾವುದೇ ಮಾರಾಟಗಾರರನ್ನು ಆಯ್ಕೆ ಮಾಡಲು ಆಯ್ಕೆಯ ಸ್ವಾತಂತ್ರ್ಯ. ಸ್ಪರ್ಧಾತ್ಮಕ ಮಾರುಕಟ್ಟೆಯಿಂದ ಉತ್ತಮ ಬೆಲೆ ದೊರೆಯುವುದು. ಯಾವುದೇ ಶುಲ್ಕ, ಕಮಿಷನ್ ಇಲ್ಲ. ಉತ್ಪಾದಕರು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ದೊಡ್ಡ ಉಳಿತಾಯ.
ಗ್ರಾಹಕರ ಪಾವತಿಯಲ್ಲಿ ಉತ್ಪಾದಕರ ಹೆಚ್ಚಿನ ಪಾಲು. ಸಾಗಾಣೆಯ ಖರ್ಚು ಕಡಿಮೆ. ಮಧ್ಯವರ್ತಿಗಳು ಕಡಿಮೆ ಅಥವಾ ಇಲ್ಲವೇ ಇಲ್ಲ. ಗ್ರಾಮೀಣ ಯುವಕರಿಗೆ ವ್ಯಾಪಾರ ಮಾಡಲು ಮತ್ತು ಸರಬರಾಜು ಕೊಂಡಿಯಾಗಲು ಅವಕಾಶ. ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ, ಉತ್ತಮ ಬೆಲೆ ಪಡೆಯಲು ಸಾಧ್ಯ. ಎಲ್ಲ ಕೃಷಿ ಉತ್ಪನ್ನಗಳ ಮಾರಾಟದ ಸ್ವಾತಂತ್ರ್ಯವನ್ನು ದೇಶದೆಲ್ಲಡೆ ಮಾರಾಟ ಮಾಡುವಂತೆ ವಿಸ್ತರಿಸಲಾಗಿದೆ. ರೈತರ ಉತ್ಪಾದಕರ ಕಂಪನಿಗಳು ಸಣ್ಣ ರೈತರಿಗೆ ದರ ಚೌಕಾಸಿ ಮಾಡಲು ಹಾಗೂ ಉತ್ತಮ ಬೆಲೆ ಒದಗಿಸಲು ಸಹಾಯವಾಗುತ್ತವೆ. ರಫ್ತು ಸ್ಪರ್ಧಾತ್ಮಕತೆ ಹೆಚ್ಚಾಗುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ. ಸ್ಥಳೀಯ ಎಸ್‍ಡಿಎಂಗಳ (ಜಿಲ್ಲಾಧಿಕಾರಿಗಳು) ಮಟ್ಟದಲ್ಲಿ ಕನಿಷ್ಠ ವೆಚ್ಚದೊಂದಿಗೆ ಸಮಯಕ್ಕೆ ಅನುಗುಣವಾಗಿ ವಿವಾದ ಪರಿಹಾರವನ್ನು ಕಾಯಿದೆ ಉತ್ತೇಜಿಸುತ್ತದೆ. ಖರೀದಿದಾರರು ಅವತ್ತಿನ ದಿನವೇ ಅಥವಾ ಒಪ್ಪಂದದ ಪ್ರಕಾರ 3 ದಿನಗಳಲ್ಲಿ ರೈತರಿಗೆ ಹಣ ಪಾವತಿ ಮಾಡಬೇಕು. ಎಲ್ಲ ರೈತ ಸಂಸ್ಥೆಗಳನ್ನು “ರೈತರು” ಎಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ರೈತರಂತೆಯೇ ಎಲ್ಲ ಲಾಭಗಳು ದೊರೆಯುತ್ತವೆ. ಎಫ್‍ಸಿಐ ಮತ್ತು ಇತರೆ ಸರಕಾರಿ ಎಜೆನ್ಸಿಗಳು ರೈತರಿಂದ ಖರೀದಿ ಮಾಡುವುದನ್ನು ಮುಂದುವರೆಸುತ್ತವೆ. ಕಾಯ್ದೆಯು ಎಪಿಎಂಸಿಯನ್ನು ದುರ್ಬಲಗೊಳಿಸುವುದಿಲ್ಲ. ಇದು ಮಾರುಕಟ್ಟೆ ಹೊರಗೆ ಹೆಚ್ಚುವರಿ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ರೈತರು ಖರೀದಾರರನ್ನು ಆಯ್ಕೆ ಮಾಡಬಹುದು ಮತ್ತು ಬೆಲೆಯನ್ನು ನಿರ್ಧರಿಸಬಹುದು. ನೋಂದಣಿ/ ವಹಿವಾಟು ಶುಲ್ಕವಿಲ್ಲದೆ ರೈತರು ಎಪಿಎಂಸಿ ಹೊರಗೆ ಉತ್ತಮ ಬೆಲೆ ನೀಡುವ ಖರೀದಿದಾರರಿಗೆ ಮಾರಾಟ ಮಾಡಬಹುದು. ರೈತರ ಹಿತಾಸಕ್ತಿಗಳನ್ನು ಕಾಪಾಡಲು ಈ ಕಾಯ್ದೆ ಸಾಕಷ್ಟು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಎಪಿಎಂಸಿ ಮಾರುಕಟ್ಟೆಗಳು ಮೊದಲಿನಂತೆ ಕಾರ್ಯನಿರ್ವಹಿಸುತ್ತವೆ. ಕಾಯ್ದೆಯು ರೈತರ ಭೂಮಿಯನ್ನು ವರ್ಗಾಯಿಸಲು ಪ್ರತಿಬಂಧಿಸುತ್ತದೆ.
ಹೆಚ್ಚಿನ ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274 ಇವರನ್ನು ಸಂಪರ್ಕಿಸಬಹುದು ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಪ್ರಕಟಣೆ ಕೋರಿದೆ.

error: Content is protected !!