ಗ್ರಾ.ಪಂ. ಚುನಾವಣೆ : ಕೊಡಗಿನಲ್ಲಿ 43 ಮಂದಿ ಅವಿರೋಧ ಆಯ್ಕೆ

December 30, 2020

ಮಡಿಕೇರಿ ಡಿ. 30 : ಮಡಿಕೇರಿ ತಾಲ್ಲೂಕಿನ (26) ಮತ್ತು ಸೋಮವಾರಪೇಟೆ ತಾಲ್ಲೂಕಿನ (40) ಒಟ್ಟು 66 ಗ್ರಾ.ಪಂ.ಗಳಲ್ಲಿ ಚುನಾವಣೆ ನಡೆದಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ 24 ಮಂದಿ, ಸೋಮವಾರಪೇಟೆ ತಾಲ್ಲೂಕಿನಲ್ಲಿ 19 ಮಂದಿ ಒಟ್ಟು 43 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಗ್ರಾ.ಪಂ.ನ 2 ನೇ ಮೊಣ್ಣಂಗೇರಿ, ಕೆ.ನಿಡುಗಣೆ ಗ್ರಾ.ಪಂ.ಯ ಹೆಬ್ಬೆಟ್ಟಗೇರಿ ಮತ್ತು ನಾಪೆÇೀಕ್ಲು ಗ್ರಾ.ಪಂ.ಕೊಳಕೇರಿ ಸೇರಿದಂತೆ ಒಟ್ಟು 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನ ಗಣಗೂರು ಗ್ರಾ.ಪಂ.ಯ ಗೋಣಿಮರೂರು, ಕೊಡಗರಹಳ್ಳಿ ಗ್ರಾ.ಪಂ.ಯ ಅಂದಗೋವೆ ಮತ್ತು ಗರ್ವಾಲೆ ಗ್ರಾ.ಪಂ.ಯ ಶಿರಂಗಳ್ಳಿ ಕ್ಷೇತ್ರ ಸೇರಿ ಒಟ್ಟು 3 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಮಡಿಕೇರಿ ತಾಲ್ಲೂಕಿನ 108 ಕ್ಷೇತ್ರಗಳಲ್ಲಿ 267 ಸ್ಥಾನಗಳಿದ್ದು, 676 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನಲ್ಲಿ 177 ಕ್ಷೇತ್ರಗಳಿಗೆ 462 ಸ್ಥಾನಗಳಿದ್ದು, 1488 ಮಂದಿ ಕಣದಲ್ಲಿದ್ದಾರೆ.


error: Content is protected !!