ಕಾಯ್ದೆ ವಿರೋಧಿಸಿದವರಿಗೆ ಲಾಠಿ ರುಚಿ

December 30, 2020

ಪಾಟ್ನಾ ಡಿ.30 : ಕೃಷಿ ಕಾಯ್ದೆ ವಿರೋಧಿಸಿ ರಾಜಭವನ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೆÇಲೀಸರು ಮಾರ್ಗ ಮಧ್ಯೆ ತಡೆದಿದ್ದಾರೆ. ಈ ವೇಳೆ ರಸ್ತೆಗೆ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತು ಮುನ್ನುಗ್ಗಲು ಪ್ರಯತ್ನಿಸಿದಾಗ ಪೆÇಲೀಸರು ಲಾಠಿ ಚಾರ್ಜ್ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ.
ವಿವಿಧ ರೈತ ಸಂಘಟನೆಗಳ ಸದಸ್ಯರು ಮತ್ತು ಎಡಪಂಥೀಯ ಪರ ಸಂಘಟನೆಗಳನ್ನು ಒಳಗೊಂಡ ಸಾವಿರಾರು ಪ್ರತಿಭಟನಾಕಾರರನ್ನು ಡಕ್ ಬಂಗಲೆ ಕ್ರಾಸಿಂಗ್‍ನಲ್ಲಿ ಪೆÇಲೀಸರು ತಡೆಯೊಡ್ಡಿದರು.
ಗಾಂಧಿ ಮೈದಾನದಲ್ಲಿ ರ್ಯಾಲಿ ಆರಂಭಿಸಿದ ಪ್ರತಿಭಟನಾಕಾರರು ಡಾಕ್ ಬಂಗಲೆಯ ಕ್ರಾಸಿಂಗ್ ಬಳಿ ಆಗಮಿಸುತ್ತಿದ್ದಂತೆ ಅಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದ ಪೆÇಲೀಸರು ಮುಂದೆ ಹೋಗಲು ಅನುಮತಿ ನೀಡಲಿಲ್ಲ. ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ ಕಿತ್ತು ಮುನ್ನುಗ್ಗಲು ಮುಂದಾದರೂ ಈ ವೇಳೆ ಪೆÇಲೀಸರು ಲಾಠಿ ಚಾರ್ಜ್ ಮಾಡಿದರು.
ರಸ್ತೆ ಮಧ್ಯೆ ನಮ್ಮನ್ನು ತಡೆಯುವುದರ ಜೊತೆ ಲಾಠಿ ಚಾರ್ಜ್ ಮಾಡಿ ತಮ್ಮ ಧ್ವನಿಯನ್ನು ಹತ್ತಿಕ್ಕಲು ಪೆÇಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

error: Content is protected !!