ಹೆಲಿಕಾಪ್ಟರ್ ಗೆ ವನ್ಯಜೀವಿ ಕಾರ್ಯಕರ್ತರ ವಿರೋಧ

December 30, 2020

ಹುಬ್ಬಳ್ಳಿ ಡಿ.30 : ಹುಲಿ ಅಭಯಾರಣ್ಯ ಹತ್ತಿರ ಖಾಸಗಿ ಹೆಲಿಕಾಪ್ಟರ್ ನ್ನು ನಿಲ್ಲಿಸಲು ಅನುವು ಮಾಡಿಕೊಟ್ಟ ಸರ್ಕಾರದ ನಡೆಗೆ ವನ್ಯಜೀವಿ ಕಾರ್ಯಕರ್ತರ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ವಾರ, ಟಿವಿಎಸ್ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ತಮ್ಮ ಖಾಸಗಿ ಹೆಲಿಕಾಪ್ಟರ್ ನ್ನು ಹುಬ್ಬಳ್ಳಿಯ ಬೆಜ್ಜುಲುಪಾಳ್ಯ ಗ್ರಾಮದ ಕಂದಾಯ ಭೂಮಿಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ನಿಲುಗಡೆ ಮಾಡಿದ್ದರು.
ಈ ಗ್ರಾಮ ಬಿಆರ್ ಟಿ ಹುಲಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ವ್ಯಾಪ್ತಿಯಲ್ಲಿದ್ದು ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪ್ರಕಾರ ಖಾಸಗಿ ಹೆಲಿಕಾಪ್ಟರ್, ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಅರಣ್ಯ ಇಲಾಖೆ ಸೇರಿದಂತೆ ಇತರ ಸರ್ಕಾರಿ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡಲಾಗಿತ್ತು ಎಂದರೆ, ಶ್ರೀನಿವಾಸನ್ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡುವಂತೆ ಮೇಲಿನಿಂದ ಪ್ರಭಾವಿ ವ್ಯಕ್ತಿಗಳ ಒತ್ತಡವಿತ್ತು ಎಂಬ ಆರೋಪ ಪರಿಸರ ರಕ್ಷಣಾಪರ ಹೋರಾಟಗಾರರದ್ದು.
ಶ್ರೀನಿವಾಸನ್ ಅವರ ಹೆಲಿಕಾಪ್ಟರ್ ಇಳಿಸಲು ಮೈಸೂರಿನ ಉಸ್ತುವಾರಿ ಸಮಿತಿಯ ಸ್ಥಳೀಯ ಆಯುಕ್ತರು ಅನುಮತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.

error: Content is protected !!